ಸಿನಿಮಾ ಸುದ್ದಿ

ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಫೆಬ್ರವರಿ 21 ಕ್ಕೆ ರಿಲೀಸ್

ನಟ ರಮೇಶ್ ಅರವಿಂದ್ ಸಿನಿಮಾಗಳು ರಿಲೀಸ್ ಆಗಿ ಸುಮಾರು 2 ವರ್ಷ ಕಳೆದಿವೆ, ಅವರೇ ಆ್ಯಕ್ಷನ್‌ ಕಟ್‌ ಹೇಳಿರುವ ಮತ್ತು ನಟನೆಯ ಯಾವೊಂದು ಸಿನಿಮಾವೂ ಬಿಡುಗಡೆಯಾಗಿಲ್ಲ.

ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಫೆಬ್ರವರಿ 21 ಕ್ಕೆ ರಿಲೀಸ್
ರಮೇಶ್ ಅರವಿಂದ್
Published On :

ನಟ ರಮೇಶ್ ಅರವಿಂದ್ ಸಿನಿಮಾಗಳು ರಿಲೀಸ್ ಆಗಿ ಸುಮಾರು 2 ವರ್ಷ ಕಳೆದಿವೆ, ಅವರೇ ಆ್ಯಕ್ಷನ್‌ ಕಟ್‌ ಹೇಳಿರುವ ಮತ್ತು ನಟನೆಯ ಯಾವೊಂದು ಸಿನಿಮಾವೂ ಬಿಡುಗಡೆಯಾಗಿಲ್ಲ. 

ಟೈಟಲ್‌ನಿಂದಲೇ ತೀವ್ರ ಕುತೂಹಲ ಹೆಚ್ಚಿಸಿರುವ ‘100’ ಸಿನಿಮಾ ನಿರ್ದೇಶಿಸಿರುವುದೂ ಅವರೇ. ಇದರ ಚಿತ್ರೀಕರಣವೂ ಮುಗಿದಿದೆ. ಬಹುನಿರೀಕ್ಷಿತ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಅವರು ಪತ್ತೇದಾರಿಯಾಗಿ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಇದು ಅವರ 101ನೇ ಸಿನಿಮಾ. ಫೆ. 21ರ ಶಿವರಾತ್ರಿ ಹಬ್ಬದಂದು ಈ ಸಿನಿಮಾ ತೆರೆ ಕಾಣಲಿದೆ.

ರಮೇಶ್‌ ಅರವಿಂದ್‌ ಅವರು ಚಿತ್ರರಂಗ ಪ್ರವೇಶಿಸಿ ಮೂರು ದಶಕ ಉರುಳಿದೆ. ಈ ಚಿತ್ರದಲ್ಲಿ ಅವರದು ವಿಭಿನ್ನ ಪಾತ್ರ. ‘ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲು ಮೊದಲಿನಿಂದಲೂ ಆಸೆ ಇತ್ತು. 

ಆಕಾಶ್ ಶ್ರೀವತ್ಸ ಅವರ ಮೂಲಕ ಇದು ಈಡೇರಿದೆ. ಟೀಸರ್‌ನಲ್ಲಿ ಕುತೂಹಲ ಮೂಡಿಸಿದ ಎಲ್ಲಾ ವಿಷಯಗಳಿಗೆ ಶೀಘ್ರವೇ ಉತ್ತರ ಸಿಗಲಿದೆ’ ಎನ್ನುತ್ತಾರೆ ಅವರು.

ಈ ಸಿನಿಮಾ ನಿರ್ದೇಶಿಸಿರುವುದು ಆಕಾಶ್‌ ಶ್ರೀವತ್ಸ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಜಯಂತ ಕಾಯ್ಕಿಣಿ, ಕೆ. ಕಲ್ಯಾಣ್ ಮತ್ತು ಆಕಾಶ್ ಶ್ರೀವತ್ಸ ಸಾಹಿತ್ಯ ರಚಿಸಿದ್ದಾರೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. 

ಗುರುಪ್ರಸಾದ್ ಎಂ.ಜಿ. ಅವರ ಛಾಯಾಗ್ರಹಣವಿದೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ಬಂಡವಾಳ ಹೂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.