ಚನ್ನಪಟ್ಟಣ: ನಿರ್ದೇಶಕನ ಜೊತೆ ನಟಿ ಎಸ್ಕೇಪ್; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ, ಐಸಿಯುನಲ್ಲಿ ತಾಯಿ
ಕನ್ನಡದ ನಿರ್ದೇಶಕನ ಜೊತೆ ನಟಿಯೊರ್ವಳು ಓಡಿ ಹೋಗಿದ್ದರಿಂದ ಮನನೊಂದ ನಟಿ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚನ್ನಪಟ್ಟಣ: ಕನ್ನಡದ ನಿರ್ದೇಶಕನ ಜೊತೆ ನಟಿಯೊರ್ವಳು ಓಡಿ ಹೋಗಿದ್ದರಿಂದ ಮನನೊಂದ ನಟಿ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ದೇಶಕ ಆಂಜಿನಪ್ಪ ಜೊತೆ ನಟಿ ವಿಜಯಲಕ್ಷ್ಮೀ ಎಸ್ಕೇಪ್ ಆಗಿದ್ದಾಳೆ. ಈ ಸುದ್ದಿ ತಿಳಿದ ಕೂಡಲೇ ನಟಿಯ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ತಮ್ಮ ಮರ್ಯಾದೆ ಹೋಗಿದೆ ಎಂಬ ಕಾರಣಕ್ಕೆ ನಟಿಯ ತಾಯಿ ಮತ್ತು ಅಜ್ಜಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕನ್ನಡ ಜವಾರಿ ಇನ್ ಲವ್, ರಾಜೀವ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಜಯಲಕ್ಷ್ಮೀ ಅಭಿನಯಿಸಿದ್ದಾರೆ. ಇನ್ನು ತುಂಗಭದ್ರ ಚಿತ್ರದ ಶೂಟಿಂಗ್ ಇದೆ ಅಂತಾ ಹೇಳಿ ವಿಜಯಲಕ್ಷ್ಮೀ ಮನೆಯಿಂದ ಹೋಗಿದ್ದು ನಂತರ ಮನೆಗೆ ಬಂದಿರಲಿಲ್ಲ. ಅಲ್ಲದೆ ಆಂಜಿನಪ್ಪ ಜೊತೆ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಆಂಜಿನಪ್ಪ ವಿರುದ್ಧ ವಿಜಯಲಕ್ಷ್ಮಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


