ರಾಜಸ್ತಾನದಲ್ಲಿ ಒಂಟೆ ಮೇಲೆ ವಿಕ್ರಮನ ಸಾಹಸ
‘ಕ್ರೇಜಿಸ್ಟಾರ್’ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಸಿನಿಮಾ ಶೂಟಿಂಗ್ ಹಂತದಲ್ಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ.

ಬೆಂಗಳೂರು: ‘ಕ್ರೇಜಿಸ್ಟಾರ್’ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಸಿನಿಮಾ ಶೂಟಿಂಗ್ ಹಂತದಲ್ಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ.
ರಾಜಸ್ಥಾನದ ಬಿರು ಬಿಸಿಲಿನಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಂಡಿದ್ದ ತಂಡ, ಸಾಹಸ ದೃಶ್ಯಗಳನ್ನೂ ಸೆರೆಹಿಡಿದುಕೊಂಡಿದೆ. ಅದೂ ಒಂಟೆಗಳ ಮೇಲೆ ಎಂಬುದು ವಿಶೇಷ!
ಚೊಚ್ಚಲ ಸಿನಿಮಾ ಎಂದ ತಕ್ಷಣ ಅಲ್ಲಿ ವಿಶೇಷತೆಗಳ ಸರಮಾಲೆಯೇ ಇರುತ್ತದೆ. ‘ತ್ರಿವಿಕ್ರಮ’ನಲ್ಲೂ ಅಂಥ ವಿಶೇಷಗಳನ್ನು ಅಳವಡಿಸುವ ಭರದಲ್ಲಿದ್ದಾರೆ ನಿರ್ದೇಶಕ ಸಹನಾ ಮೂರ್ತಿ. ಮೊದಲ ಬಾರಿ ಒಂಟೆಗಳ ಮೇಲೆ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಸುಮಾರು 15 ಒಂಟೆಗಳನ್ನು ಬಳಸಿಕೊಳ್ಳಲಾಗಿದೆ. ಒಂಟೆಗಳನ್ನು ಸಾಮಾನ್ಯವಾಗಿ ಹಾಡುಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು.
ಸತತ 15 ದಿನಗಳ ಕಾಲ ರಾಜಸ್ಥಾನದ ಮರಳುಗಾಡಲ್ಲಿ ನಡೆದ ಶೂಟಿಂಗ್ನಲ್ಲಿ ನಾಯಕಿ ಆಕಾಂಕ್ಷಾ, ಹಾಸ್ಯ ನಟ ಸಾಧುಕೋಕಿಲ, ಬಾಲಿವುಡ್ ನಟ ರೋಹಿತ್ ರಾಯ್ ಸೇರಿ ಹಲವರು ಪಾಲ್ಗೊಂಡಿದ್ದರು. ಚಿತ್ರಕ್ಕೆ ರಾಮ್ಕೋ ಬಂಡವಾಳ ಹೂಡುತ್ತಿದ್ದಾರೆ.
ಸದ್ಯ ಮೈಸೂರಿನಲ್ಲಿ 12 ದಿನಗಳ ಶೂಟಿಂಗ್ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಶೂಟಿಂಗ್ ಚಿತ್ರೀಕರಣ ನಡೆಯುತ್ತಿದೆ. ರೋಹಿತ್ ರಾಯ್ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೈ ವೋಲ್ಟೇಜ್ ಲವ್ ಸ್ಟೋರಿಯಾಗಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


