ಸಿನಿಮಾ ಸುದ್ದಿ

ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನುಸುತ್ತೆ: ಬಾಲಿವುಡ್ ಸ್ಟಾರ್ ಗಾಯಕ ಸೋನು ನಿಗಮ್

ಕನ್ನಡದಲ್ಲಿ ಹಲವಾರು ಮೆಲೋಡಿ ಸಾಂಗ್ ಗಳನ್ನು ಹಾಡಿರುವ ಬಾಲಿವುಡ್ ನ ಸ್ಟಾರ್ ಗಾಯಕ ಸೋನು ನಿಗಮ್ ಅವರು ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನುಸುತ್ತೆ: ಬಾಲಿವುಡ್ ಸ್ಟಾರ್ ಗಾಯಕ ಸೋನು ನಿಗಮ್
ಸೋನು ನಿಗಮ್
Published On :

ಕನ್ನಡದಲ್ಲಿ ಹಲವಾರು ಮೆಲೋಡಿ ಸಾಂಗ್ ಗಳನ್ನು ಹಾಡಿರುವ ಬಾಲಿವುಡ್ ನ ಸ್ಟಾರ್ ಗಾಯಕ ಸೋನು ನಿಗಮ್ ಅವರು ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನಿಸುತ್ತಿದೆ ಎಂದು ಹೇಳಿದ್ದಾರೆ. 

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟಣಾ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಸೋನು ನಿಗಮ್ ಅವರು ವೇದಿಕೆ ಮೇಲೆ ಕನ್ನಡ ಹಾಡೊಂದನ್ನು ಹಾಡಿದ್ದರು. ನಂತರ ಮಾತನಾಡಿದ ಅವರು ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನಲಿದೆ. ಅದಕ್ಕೆ ನನಗೆ ಕನ್ನಡ ಅಂದರೆ ತುಂಬಾ ಪ್ರೀತಿ, ಗೌರವ ಎಂದು ಹೇಳಿದರು. 

ವಿದೇಶಗಳಿಗೆ ಕಾರ್ಯಕ್ರಮ ಕೊಡಲು ಹೋದಾಗ ಅಲ್ಲಿ ಯಾರಾದರೂ ಕನ್ನಡ ಎಂದು ಕೂಗಿದರೆ ಸಾಕು ಕನ್ನಡದ ಹಾಡು ಹಾಡುವ ಆಸೆಯಾಗುತ್ತದೆ ಎಂದು ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಳೆ ಚಿತ್ರದ ಅನಿಸುತಿದೆ ಏಕೋ ಇಂದು ಹಾಡನ್ನು ಹಾಡಿ ಸೋನು ನಿಗಮ್ ಎಲ್ಲರನ್ನೂ ರಂಜಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.