ಸಿನಿಮಾ ಸುದ್ದಿ

ಶುಭ್ ಮಂಗಳ್ ಜ್ಯಾದಾ ಸಾವಧಾನ್' ಗೇ ಚಿತ್ರಕ್ಕೆ ಟ್ರಂಪ್ ಮೆಚ್ಚುಗೆ

ಇರಾಕ್ ನೆಲೆಗಳ ಮೇಲೆ ಇರಾನ್ ನ ಕ್ಷಿಪಣಿ ದಾಳಿಯ ನಂತರ ಆಘಾತಕಾರಿ ಮಿದುಳಿನ ಗಾಯಗಳಿಗೆ (ಟಿಬಿಐ) ಒಳಗಾದ ಅಮೆರಿಕ ಯೋಧರ ಸಂಖ್ಯೆ 110 ಕ್ಕೆ ಏರಿದೆ ಎಂದು ಪೆಂಟಗನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಶುಭ್ ಮಂಗಳ್ ಜ್ಯಾದಾ ಸಾವಧಾನ್' ಗೇ ಚಿತ್ರಕ್ಕೆ ಟ್ರಂಪ್ ಮೆಚ್ಚುಗೆ
ಸಂಗ್ರಹ ಚಿತ್ರ
Published On :

ನವದೆಹಲಿ: ನಟ ಆಯುಷ್ಮಾನ್ ಖುರಾನ ನಟಿಸಿರುವ ಶುಭ್ ಮಂಗಳ್ ಜ್ಯಾದಾ ಸಾವಧಾನ್ ಚಿತ್ರಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
    
ಶುಭ್ ಮಂಗಳ್ ಜ್ಯಾದಾ ಸಾವಧಾನ್ ಸಲಿಂಗ ಕಾಮದ ವಿಷಯವನ್ನಾಧರಿಸಿದ ಚಿತ್ರವಾಗಿದೆ. ಚಿತ್ರದ ಕುರಿತ ಘೋಷಣೆ ಹೊರಬಿದ್ದ ದಿನದಿಂದಲೂ  ಚಿತ್ರದ ಕುರಿತು ಹಲವು ಟೀಕೆ, ಪರ-ವಿರೋಧದ ಮಾತುಗಳು ಕೇಳಿ ಬರುತ್ತಲೇ ಇವೆ. 

ಇದರಂತೆ ಚಿತ್ರದ ಕುರಿತು ಮಾನವ ಹಕ್ಕುಗಳ ಹೋರಾಟಗಾದ ಪೀಟರ್ ಟ್ಯಾಚೆಲ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಸಲಿಂಗಕಾಮಿ ಪ್ರಣಯವನ್ನು ಒಳಗೊಂಡ ಹೊಸ ಬಾಲಿವುಡ್ ಚಿತ್ರ ಹೊರಬರುತ್ತಿದ್ದು, ಜನರ ಮನಗೆಲ್ಲುವ ಆಶಯವನ್ನು ಹೊಂದಿದೆ ಎಂದು ಹೇಳುವ ಮುಲಕ ಚಿತ್ರಕ್ಕೆ ಮೆಚ್ಚುಗೆ ಹಾಗೂ ಸಂತಸವನ್ನು ವ್ಯಕ್ತಪಡಿಸಿದ್ದರು. 

ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿ, ಗ್ರೇಟ್ ಎಂದು ಹೇಳುವ ಮೂಲಕ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಶುಭ್ ಮಂಗಳ್ ಜ್ಯಾದಾ ಸಾವಧಾನ್’ ಚಿತ್ರ ಸಲಿಂಗ ಕಾಮದ ವಿಷಯವನ್ನಾಧರಿಸಿದೆ. ಚಿತ್ರವನ್ನು ಹಿತೇಶ್ ಕೇವಲ್ಯ ನಿರ್ದೇಶಿಸಿದ್ದು. ನಿನ್ನೆಯಷ್ಟೇ ಚಿತ್ರ ಬಿಡುಗಡೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.