'10' ಶೂಟಿಂಗ್ ಮುಗಿಸಿದರೂ ಬಾಕ್ಸಿಂಗ್ ಗುಂಗಿನಿಂದ ಹೊರಬಾರದ ರಾಜ್ ಮೊಮ್ಮಗ!

ಕರಮ್ ಚಾವ್ಲಾ ನಿರ್ದೇಶಿಸಿ ವಿನಯ್ ರಾಜ್ ನಟಿಸಿರುವ '10' ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ. ಈ ಸಿನಿಮಾದಲ್ಲಿ ವಿನಯ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ,
ಸಿನಿಮಾದಲ್ಲಿ ಬಾಕ್ಸರ್ ಪಾತ್ರಕ್ಕಾಗಿ ವಿಶೇಷವಾಗಿ ಕಥೆ ಹೆಣೆಯಲಾಗಿದೆ, ಶೂಟಿಂಗ್ ಮುಗಿದಿದ್ದರೂ ವಿನಯ್ ರಾಜ್ ಗೆ ಇನ್ನೂ ಹ್ಯಾಂಡ್ ಗ್ಲೋವ್ಸ್ ಬಿಚ್ಚಿಡುವ ಮನಸ್ಸಾಗಿಲ್ಲ, ಶೂಟಿಂಗ್ ಉತ್ತಮವಾಗಿ ನಡೆಯಿತು. ಯಾವುದೇ ರೀತಿಯ ಗದ್ದಲವಿಲ್ಲದೇ ನಾವು ಶೂಟಿಂಗ್ ಮುಗಿಸಿದ್ದೇವೆ, ಸಿನಿಮಾ ಶೂಂಟಿಂಗ್ ಪೂರ್ಣವಾಗಿ ಮುಗಿದ ನಂತರವಷ್ಟೇ ಸಿನಿಮಾ ಸಂಬಂಧಿತ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿನಯ್ ರಾಜ್ ತಿಳಿಸಿದ್ದಾರೆ.
ಬಾಕ್ಸರ್ ಪಾತ್ರದಲ್ಲಿ ನಟಿಸಿರುವುದು ತುಂಬಾ ಹೊಸ ಅನುಭವ ನೀಡಿದೆ. ಸಿನಿಮಾಗಾಗಿ ಸುಮಾರು 5ರಿಂದ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು. ಈಗಲೂ ಕೂಡ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿರುವುದಾಗಿ ವಿನಯ್ ರಾಜ್ ಹೇಳಿದ್ದಾರೆ. ವಾರದಲ್ಲಿ ಮೂರು ದಿನವಾದರೂ ಬಾಕ್ಸಿಂಗ್ ರಿಂಗ್ ಗೆ ಹೋಗುತ್ತೇನೆ, ಹೀಗಾಗಿ ಬಾಕ್ಸಿಂಗ್ ನನ್ನ ಜೀವನದ ಒಂದು ಅಂಗವಾಗಿ ಹೋಗಿದೆ ಎಂದು ವಿನಯ್ ಅಭಿಪ್ರಾಯ ಪಟ್ಟಿದ್ದಾರೆ.
3 ಗಂಟೆ ವ್ಯಾಯಾಮ ಮಾಡಿ ಒಂದೂವರೆ ಗಂಟೆ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತೇನೆ. ಜೊತೆಗೆ ಕಠಿಣ ಪಥ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ, ನಿರ್ದೇಶಕ ಕರ್ಮ್ ಚಾವ್ಲಾ ಜೊತೆಗಿನ ಕೆಲಸದ ಅನುಭವ ಬಿಚ್ಚಿಟ್ಟ ವಿನಯ್ ರಾಜ್, ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ, ಪರಸ್ಪರ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.. ರನ್ ಆಂಟೋನಿ ಸಿನಿಮಾದಿಂದ ನಾವಿಬ್ಬರು ಪರಿಚಯಸ್ಥರು,
2 ವರ್ಷದ ಹಿಂದೆಯೇ ಅವರು ಕಥೆಯ ಬಗ್ಗೆ ಹೇಳಿದ್ದರು, ಅದರ ಸಂಬಂಧ ನಾವು ಚರ್ಚಿಸುತ್ತಿದ್ದೆವು, ಆದರೆ ಕಥೆಯನ್ನು ಅವರ ಮತ್ತಷ್ಟು ಉತ್ತಮ ಗೊಳಿಸುತ್ತಿದ್ದರು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಜೊತೆ ಕಥೆಯ ಬಗ್ಗೆ ತಿಳಿಸಿದ್ದರು, ಅವರು ಕಥೆ ಮೆಚ್ಚಿದ ನಂತರ ಮೂವರು ಒಟ್ಟಾಗಿ ಕುಳಿತು ಚರ್ಚಿಸುತ್ತಿದ್ದೆವು ಎಂದು ವಿನಯ್ ವಿವರಿಸಿದ್ದಾರೆ.
ಸದ್ಯ ಸಿನಿಮಾ ಪೋಸ್ಚ್ ಪ್ರೊಡಕ್ಷನ್ ಹಂತದಲ್ಲಿದ್ದು ಇನ್ನು 2 -3 ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


