ಭಜರಂಗಿ -2 ಸಿನಿಮಾ ಸೆಟ್ ಗೆ ಬೆಂಕಿ ಹಿನ್ನೆಲೆ: ರಿಲೀಸ್ ದಿನಾಂಕ ಮುಂದೂಡಿಕೆ
ಶಿವರಾಜ್ ಕುಮಾರ್ ನಟನೆಯ ಭಜರಂಗಿ ಸಿನಿಮಾ ಸೆಟ್ ಗೆ ಜನವರಿ 16 ರಂದು ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತ್ತು, ಜನವರಿ ಅಂತ್ಯದೊಳಗೆ ಸಿನಿಮಾ ರಿಲೀಸ್ ಆಗಬೇಕಿತ್ತು, ಆದರೆ ಸೆಟ್ ಗೆ ಬೆಂಕಿ ಬಿದ್ದ ಪರಿಣಾಮ ರಿಲೀಸ್ ಡೇಟ್ ಮುಂದೂಡಲಾಗಿದೆ ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ.

ಶಿವರಾಜ್ ಕುಮಾರ್ ನಟನೆಯ ಭಜರಂಗಿ ಸಿನಿಮಾ ಸೆಟ್ ಗೆ ಜನವರಿ 16 ರಂದು ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತ್ತು, ಜನವರಿ ಅಂತ್ಯದೊಳಗೆ ಸಿನಿಮಾ ರಿಲೀಸ್ ಆಗಬೇಕಿತ್ತು, ಆದರೆ ಸೆಟ್ ಗೆ ಬೆಂಕಿ ಬಿದ್ದ ಪರಿಣಾಮ ರಿಲೀಸ್ ಡೇಟ್ ಮುಂದೂಡಲಾಗಿದೆ ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ.
ಮೊದಲ ಹಂತದಲ್ಲಿ ಅಂದರೆ ಸೆಟ್ ಗೆ ಬೆಂಕಿ ಬೀಳುವ ವರೆಗೆ ಶೇ. 80 ರಷ್ಟು ಶೂಟಿಂಗ್ ಮುಗಿದಿತ್ತು, ಆದರೆ ಉಳಿದ ಭಾಗದ ಶೂಟಿಂಗ್ ಗಾಗಿ ಆರ್ಟ್ ಡಿಪಾರ್ಟ್ ಮೆಂಟ್ ಮತ್ತೆ ಸೆಟ್ ಅನ್ನು ಮರು ಸೃಷ್ಟಿಸುತ್ತಿದೆ. ಮೋಹನ್ ಬಿ ಕೆರೆ ಮೊದಲ ಬಾರಿ 26 ದಿನಗಳಲ್ಲಿ ಸೆಟ್ ಅಪ್ ಮಾಡಿದ್ದರು. ಈಗ ಇನ್ನು ಕಡಿಮೆ ಅವಧಿಯಲ್ಲಿ ಸೆಟ್ ನಿರ್ಮಾಣ ವಾಗಲಿದೆ. ಹೀಗಾಗಿ ಕೆಲಸ ಬೇಗ ಮುಗಿಯಲಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯ ಆಕಸ್ಮಿಕ ಬೆಂಕಿ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಷ ತಿಳಿಸಿದ್ದಾರೆ.
ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಲಾಗಿದ್ದ ಗುಹೆ ಸೆಟ್‌ನಲ್ಲಿ, ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಂತೆ ಎಲ್ಲಾ ಸುಸೂತ್ರವಾಗೇ ನಡಿಯುತ್ತಿತ್ತು. ಈ ವೇಳೆ ನಟ ಶಿವರಾಜ್ ಕುಮಾರ್ ಸೇರಿದಂತೆ 200 ಜನ ಜ್ಯೂನಿಯರ್ ಆರ್ಟಿಸ್ಟ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆಗ ಇದ್ದಕ್ಕಿದ್ದಂತೆ ಸೆಟ್‍ಗೆ ಬೆಂಕಿ ಬಿದ್ದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸೆಟ್ ಹೊತ್ತಿ ಉರಿದಿತ್ತು.
ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


