ಸುಮಲತಾ ಜೀವನ ಕುರಿತ ವೆಬ್ ಸಿರೀಸ್ ತರಲು ನಿರ್ದೇಶಕ ಗುರು ದೇಶಪಾಂಡೆ ಯೋಜನೆ!
ಸಂಸದೆ ಸುಮಲತಾ ಅಂಬರೀಷ್ ಅವರನ್ನು ಇತ್ತೀಚೆಗೆ ರಾಜಾಹುಲಿ ನಿರ್ದೇಶಕ ಗುರು ದೇಶಪಾಂಡೆ ಭೇಟಿ ಮಾಡಿದ್ದರು. ಈ ಭೇಟಿ ಸಿನಿಮಾ ರಂಗದಲ್ಲಿ ಹಲವು ಊಹಾ ಪೋಹeಗಳಿಗೆ ಕಾರಣವಾಗಿತ್ತು.

ಸಂಸದೆ ಸುಮಲತಾ ಅಂಬರೀಷ್ ಅವರನ್ನು ಇತ್ತೀಚೆಗೆ ರಾಜಾಹುಲಿ ನಿರ್ದೇಶಕ ಗುರು ದೇಶಪಾಂಡೆ ಭೇಟಿ ಮಾಡಿದ್ದರು. ಈ ಭೇಟಿ ಸಿನಿಮಾ ರಂಗದಲ್ಲಿ ಹಲವು ಊಹಾ ಪೋಹಗಳಿಗೆ ಕಾರಣವಾಗಿತ್ತು.
ಸುಮಲತಾ ಅವರ ಜೀವನ ಕುರಿತ ವೆಬ್ ಸಿರೀಸ್ ತಯಾರಿಸಲು ಗುರು ದೇಶಪಾಂಡೆ ಪ್ಲಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ, ಸುಮಾರು 10 ರಿಂದ 15 ಎಪಿಸೋಡ್ ನಲ್ಲಿ ಸುಮಲತಾ ಜೀವನ ತೆರೆಯ ಮೇಲೆ ಅನಾವರಣಗೊಳ್ಳಲಿದೆ.
ವೆಬ್ ಸಿರೀಸ್ ಅಥವಾ ಡಾಕ್ಯುಮೆಂಟರಿ ಇಲ್ಲವೇ ಸಿನಿಮಾ ಮಾಡಲಿದ್ದಾರೆ ಎಂಬು ಸುದ್ದಿಗಳು ಹರಿದಾಡುತ್ತಿವೆ. ಆದರೆ ವಿಷಯ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಜೀವನ ಚರಿತ್ರೆಗಾಗಿ ಸಿದ್ಧತೆ ನಡೆಸಲಾಗುತ್ತಿದೆ.
220 ಸಿನಿಮಾಗಳಲ್ಲಿ ನಟಿಸಿರುವ ಸಂಸದೆ ಸುಮಲತಾ ಅವರ ಜೀವನ ಪಯಣ, ರಾಜಕೀಯ ವೃತ್ತಿ ಸಂಬಂಧ ಸುದೀರ್ಘ ಜೀವನ ಚರಿತ್ರೆಗಾಗಿ ಯೋಜಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
2019ರ ಮಂಡ್ಯ ಲೋಕಸಭಾ ಅಂದರೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದಿದ್ದನ್ನು ಹೈಲೈಟ್ ಮಾಡಲು ನಿರ್ದೇಶಕರು ಪ್ಲಾನ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


