339 ಕೆಜಿ ಚಾಕೋಲೇಟ್ ನಿಂದ ಗಾಯಕ ಎಸ್‌ಬಿಪಿಯ ಪ್ರತಿಮೆ ನಿರ್ಮಾಣ!
ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಮರಣೆಗಾಗಿ ಚಾಕೊಲೇಟ್ ಅಂಗಡಿಯೊಂದರಲ್ಲಿ ಗಾಯಕನ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿದೆ.

ಪುದುಚೇರಿ: ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಮರಣೆಗಾಗಿ ಚಾಕೊಲೇಟ್ ಅಂಗಡಿಯೊಂದರಲ್ಲಿ ಗಾಯಕನ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿದೆ.
ಪುದುಚೇರಿಯ ಮಿಷನ್ ಸ್ಟ್ರೀಟ್‌ನಲ್ಲಿರುವ ಅಂಗಡಿಯಲ್ಲಿ 5.8 ಅಡಿ ಎತ್ತರ 339 ಕೆ.ಜಿ. ತೂಕದ ಬಾಲಸುಬ್ರಮಣ್ಯಂ ಚಾಕೊಲೇಟ್ ಪ್ರತಿಮೆ ತಯಾರಿಸಿ ಪ್ರದರ್ಶಿಸಲಾಗಿದೆ. ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕೊಲೇಟ್ ನಿಂದಲೇ ಮಾಡಲಾಗಿದೆ.ಈ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸೀಸನ್ ನಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯ ಪ್ರದರ್ಶನ ಏರ್ಪಡಿಸಿದ್ದಾರೆ.
ಈ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿದ ರಾಜೇಂದ್ರನ್, ಇದನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದರು.

ಅಂಗಡಿಯು ಈ ಹಿಂದೆ ಎ ಪಿ ಜೆ ಅಬ್ದುಲ್ ಕಲಾಂ, ಚಲನಚಿತ್ರ ನಟ ರಜನಿಕಾಂತ್ ಅಲ್ಲದೆ ಕೆಲ ಕ್ರಿಕೆಟಿಗರ ಚಾಕೊಲೇಟ್ ಪ್ರತಿಮೆಗಳನ್ನು ತಯಾರಿಸಿ ಪ್ರದರ್ಶಿಸಿತ್ತು ಎನ್ನುವುದು ಗಮನಾರ್ಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


