ಸಿನಿಮಾ ಸುದ್ದಿ

ಶ್ರೀಮುರುಳಿ 'ಮದಗಜ' ಟೀಸರ್ ಗೆ ಅಭಿಮಾನಿಗಳು ಫಿದಾ!

ನಟ ಶ್ರೀಮುರಳಿ ‘ಭರಾಟೆ’ಯ ನಂತರ ಮತ್ತೊಂದು ಅದ್ಧೂರಿ ಚಿತ್ರ ‘ಮದಗಜ’ದ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಮುರಳಿ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿರುವ ಈ ಚಿತ್ರದ ಕೂತೂಹಲಕಾರಿ ಫಸ್ಟ್‌ಲುಕ್‌ ಟೀಸರ್‌ವೊಂದು ಈಗ ಹೊರಬಿದ್ದಿದೆ.

ಶ್ರೀಮುರುಳಿ 'ಮದಗಜ' ಟೀಸರ್ ಗೆ ಅಭಿಮಾನಿಗಳು ಫಿದಾ!
ಮದಗಜ ಪೋಸ್ಚರ್
Published On :

ನಟ ಶ್ರೀಮುರಳಿ ‘ಭರಾಟೆ’ಯ ನಂತರ ಮತ್ತೊಂದು ಅದ್ಧೂರಿ ಚಿತ್ರ ‘ಮದಗಜ’ದ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಮುರಳಿ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿರುವ ಈ ಚಿತ್ರದ ಕೂತೂಹಲಕಾರಿ ಫಸ್ಟ್‌ಲುಕ್‌ ಟೀಸರ್‌ವೊಂದು ಈಗ ಹೊರಬಿದ್ದಿದೆ.

ಈ ಟೀಸರ್‌ ಅನ್ನು ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಬಿಡುಗಡೆ ಮಾಡಿದ್ದು, ಯ್ಯೂಟೂಬ್‌, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಪುಟಗಳಲ್ಲಿ ಹವಾ ಎಬ್ಬಿಸುತ್ತಿದೆ.

ಅಯೋಗ್ಯ ನಿರ್ದೇಶಕ ತಮ್ಮ ಎರಡನೇ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಎಸ್ ಗೌಡ ಸಿನಿಮಾ ನಿರ್ಮಿಸುತ್ತಿದ್ದಾರೆ.

ಭರಾಟೆ ನಂತರ ಶ್ರೀಮುರುಳಿ ನಟನೆದ ಮದಗಜ ಬರುತ್ತಿದೆ,. ಅಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಜಗಪತಿ ಬಾಬು ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ, ಈಗಾಗಲೇ ಶೇ.70 ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ಜನವರಿ ಅಂತ್ಯದಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.