ಸಿನಿಮಾ ಸುದ್ದಿ

ಸಿನಿಪ್ರೇಮಿಗಳಿಗೆ ಸಿಹಿಸುದ್ದಿ ಕೊಟ್ಟ ಪ್ರಶಾಂತ್ ನೀಲ್: 'ಕೆಜಿಎಫ್​ ಚಾಪ್ಟರ್​-2' ಟೀಸರ್ ಬಿಡುಗಡೆಗೆ ಮಹೂರ್ತ ಫಿಕ್ಸ್

ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಸೇರಿದಂತೆ ಸಹಸ್ರಾರು ಜನರು ವರ್ಷಗಳಿಂದ ಕಾಯುತ್ತಿರುವ ಕ್ಷಣ ಇದೀಗ ಸಮೀಪಿಸುತ್ತಿದೆ. "ಕೆಜಿಎಫ್​ ಚಾಪ್ಟರ್ ​-2" ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.

ಸಿನಿಪ್ರೇಮಿಗಳಿಗೆ ಸಿಹಿಸುದ್ದಿ ಕೊಟ್ಟ ಪ್ರಶಾಂತ್ ನೀಲ್: 'ಕೆಜಿಎಫ್​ ಚಾಪ್ಟರ್​-2' ಟೀಸರ್ ಬಿಡುಗಡೆಗೆ ಮಹೂರ್ತ ಫಿಕ್ಸ್
ಕೆಜಿಎಫ್​ ಚಾಪ್ಟರ್ ​-2
Published On :

ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಸೇರಿದಂತೆ ಸಹಸ್ರಾರು ಜನರು ವರ್ಷಗಳಿಂದ ಕಾಯುತ್ತಿರುವ ಕ್ಷಣ ಇದೀಗ ಸಮೀಪಿಸುತ್ತಿದೆ. "ಕೆಜಿಎಫ್​ ಚಾಪ್ಟರ್ ​-2" ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.

2021ರ ಜನವರಿ 8ರಂದು ರಾಕಿ ಬಾಯ್ ಯಶ್ "ಕೆಜಿಎಫ್​ ಚಾಪ್ಟರ್​​-2" ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಘೋಷಿಸಿದ್ದಾರೆ.

"ಕೆಜಿಎಫ್​​ ಚಾಪ್ಟರ್-​ 1" ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳಾದ ಸಂದರ್ಭ ಅಭಿಮಾನಿಗಳಿಗೆ ನಿರ್ದೇಶಕರು ಟ್ವೀಟ್ ಮೂಲಕ ಈ ಸಿಹಿ ಸುದ್ದಿ ನೀಡಿದ್ದಾರೆ. "ಕೆಜಿಎಫ್ ಚಾಪ್ಟರ್ 1" 2018ರ ಡಿಸೆಂಬರ್ 21 ರಂದು ತೆರೆಕಂಡಿತ್ತು

"ಸಾಮ್ರಾಜ್ಯದ ಒಂದು ಝಲಕ್.. ಇದಕ್ಕಾಗಿ ಒಂದು ವರ್ಷ ಹೆಚ್ಚಿನ ಸಮಯ ಹಿಡಿಯಿತು. ಆದ್ರೆ ನಾವು ಮತ್ತಷ್ಟು ಸ್ಟ್ರಾಂಗರ್, ಬಿಗ್ಗರ್​ ಹಾಗೂ ಡೆಡ್​​ಲಿಯರ್​ ಆಗಿ ಬರುತ್ತಿದ್ದೇವೆ. ಜನವರಿ 8ರಂದು ಬೆಳಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲ್ಮ್ಸ್​​ ಯೂಟ್ಯೂಬ್​ ಚಾನಲ್​​ನಲ್ಲಿ ಕೆಜಿಎಫ್​ ಚಾಪ್ಟರ್​-2 ಟೀಸರ್ ರಿಲೀಸ್​ ಆಗಲಿದೆ." ನಿರ್ದೇಶಕರು ಹೇಳಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಕೂಡ ಜನವರಿ 8 ಆಗಿದ್ದು ಅಂದೇ ಹೊಸ ಟೀಸರ್ ಬಿಡುಗಡೆಯಾಗುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.