'ಬೈ 2 ಲವ್' ರೊಮ್ಯಾಂಟಿಕ್ ಚಿತ್ರದಲ್ಲಿ ಧನ್ವೀರ್, ಶ್ರೀಲೀಲಾ ಜೋಡಿ!
ನಿರ್ದೇಶಕ ಹರಿ ಸಂತೋಷ್ ಅವರ ಮುಂದಿನ ಯೋಜನೆಯು ನಟ ಧನ್ವೀರ್ ಅಭಿನಯದ ಒಂದು ರೊಮ್ಯಾಂಟಿಕ್ ಡ್ರಾಮಾ ಆಗಿದ್ದು ಇದಕ್ಕಾಗಿ ನಟನ ಆಕ್ಷನ್ ಎಂಟರ್ಟೈನರ್ "ಬಂಪರ್" ಶೂಟಿಂಗ್ ಪ್ರಾರಂಭಕ್ಕೆ ಮುನ್ನವೇ ಕೆಲಸ ಪ್ರಾರಂಭವಾಗಲಿದೆ.

ನಿರ್ದೇಶಕ ಹರಿ ಸಂತೋಷ್ ಅವರ ಮುಂದಿನ ಯೋಜನೆಯು ನಟ ಧನ್ವೀರ್ ಅಭಿನಯದ ಒಂದು ರೊಮ್ಯಾಂಟಿಕ್ ಡ್ರಾಮಾ ಆಗಿದ್ದು ಇದಕ್ಕಾಗಿ ನಟನ ಆಕ್ಷನ್ ಎಂಟರ್ಟೈನರ್ "ಬಂಪರ್" ಶೂಟಿಂಗ್ ಪ್ರಾರಂಭಕ್ಕೆ ಮುನ್ನವೇ ಕೆಲಸ ಪ್ರಾರಂಭವಾಗಲಿದೆ. ಚಿತ್ರಕ್ಕೆ "ಬೈ 2 ಲವ್" ಎಂದು ಹೆಸರಿಡಲಾಗಿದ್ದು ನಿರ್ದೇಶಕರೇ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದಾರೆ.
ರೋಮ್ಯಾಂಟಿಕ್ ಹಿನ್ನೆಲೆಯ ಈ ಚಿತ್ರದಲ್ಲಿ ಧನ್ವೀರ್ ಗೆ ಜೋಡಿಯಾಗಿ "ಕಿಸ್" ನಾಯಕಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಚಿತ್ರದ ಮೂಲಕ ಅಭಿನಯ ಕ್ಷೇತ್ರಕ್ಕೆ ಆಗಮಿಸಿದ್ದ ನಟಿಇತ್ತೀಚೆಗೆ ಧ್ರುವ ಸರ್ಜಾ ಅವರ :ದುಬಾರಿ"ಚಿತ್ರಕ್ಕೆ ಸಹಿ ಹಾಕಿದ್ದಾರೆ.
"ಬೈ 2 ಲವ್" ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಜೋಡಿಯೊಂದನ್ನು ಪರಿಚಯಿಸಲಿದೆ. ನಿರ್ದೇಶಕ ಸುನಿಯ"ಬಜಾರ್" ಮೂಲಕ ನಾಯಕ ನಟನಾದ ಧನ್ವೀರ್ ಎರಡನೇ ಬಾರಿಗೆ ಬೆಳ್ಳಿ ಪರದೆಯಲ್ಲಿಕಾಣಿಸಿಕೊಳ್ಳಲಿದ್ದಾರೆ. "ಅಲೆಮಾರಿ", "ಕಾಲೇಜ್ ಕುಮಾರ್" ನಂತಹಾ ಚಿತ್ರಗಳ ನಿರ್ದೇಶಕ ಹರಿ ಸಂತೋಷ್ ಅವರ "ಬೈ 2 ಲವ್" ಅನ್ನು ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಇದಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ತಂಡವು ಜನವರಿ 4 ರಂದು ಚಿತ್ರೀಕರಣ ಪ್ರಾರಂಭಿಸಲಿದೆ.

ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಇದ್ದರೆ ಮಹೇಂದ್ರ ಸಿಂಹ ಡಿಒಪಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


