'ಶಕೀಲಾ' ಚಿತ್ರದ ಟ್ರೈಲರ್ ಬಿಡುಗಡೆ; ತನ್ನದೇ ಛಾಪು ಮೂಡಿಸುವಲ್ಲಿ ವಿಫಲ!
ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಿಂದಿ ಭಾಷೆಯ ಬಹುನಿರೀಕ್ಷಿತ ಸಿನಿಮಾ 'ಶಕೀಲಾ' ಟ್ರೈಲರ್ ನಿರೀಕ್ಷೆಯನ್ನು ನಿರಾಶೆಗೊಳಿಸಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಿಂದಿ ಭಾಷೆಯ ಬಹುನಿರೀಕ್ಷಿತ ಸಿನಿಮಾ 'ಶಕೀಲಾ' ಟ್ರೈಲರ್ ನಿರೀಕ್ಷೆಯನ್ನು ನಿರಾಶೆಗೊಳಿಸಿದೆ. ಹಿಂದಿ ಸಂಗೀತದಿಂದ ಫಿಲ್ಮ್ ಸೆಟ್ ವರೆಗೂ ಶಕೀಲಾ ಸಿನಿಮಾದ ಟ್ರೈಲರ್ ವಿದ್ಯಾಬಾಲನ್ ಅವರ ಡರ್ಟಿ ಪಿಕ್ಚರ್ ನ್ನು ನೆನಪಿಸುತ್ತದೆಯೇ ಹೊರತು ತನ್ನದೇ ಆದ ಛಾಪು ಮೂಡಿಸುವುದಕ್ಕೆ ವಿಫಲಗೊಂಡಿದೆ.
ಸಿನಿಮಾದ ನಿರ್ದೇಶಕರು ಹೇಳುವಂತೆ ಶಕೀಲ ಸಿನಿಮಾ, ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಜೀವನದ ಘಟನೆಗಳನ್ನು ಆಧರಿಸಿ ಮಾಡಿರುವ ಸಿನಿಮಾ ಆಗಿದೆ. ರಿಚಾ ಛಢಾ ಸಿನಿಮಾದಲ್ಲಿ ಶಕೀಲಾ ಪಾತ್ರವನ್ನು ನಿರ್ವಹಿಸಿದ್ದರೆ, ಪಂಕಂಜ್ ತ್ರಿಪಾಠಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಶಕೀಲ ತನ್ನ ಕುಟುಂಬ ಸದಸ್ಯರಿಂದಲೇ ಎದುರಿಸಿದ ಸಮಸ್ಯೆಗಳು, ಮೋಸ, ಸಿನಿಮಾ ರಂಗದಲ್ಲಿ ಪ್ರಭಾವಿಗಳು ಅವರ ಸಿನಿಮಾಗಳನ್ನು ನಿಷೇಧಿಸಿದ್ದು ಇವೆಲ್ಲಾ ಕಷ್ಟಗಳನ್ನು ತೋರಿಸಲಾಗಿದೆ.
ಸಿನಿಮಾದ ಟ್ರೈಲರ್ ಸೋತಿದ್ದು ಎಲ್ಲಿ?
ಕಿನ್ನರಥುಂಬಿಕಲ್ ಎಂಬ ಸಿನಿಮಾ ನಾಯಕನಿಲ್ಲದರ ಹೊರತಾಗಿಯೂ ಗೆದ್ದಿದ್ದು ಶಕೀಲಾ ಅವರ ನಟನೆಯಿಂದಾಗಿ, ಸಿಲ್ಕ್ ಸ್ಮಿತಾ ಅವರ ನಿರ್ಗಮನದಿಂದಾಗಿ ಉಂಟಾಗಿದ್ದ ನಿರ್ವಾತವನ್ನು ಶಕೀಲಾ ಯಶಸ್ವಿಯಾಗಿ ನಿಭಾಯಿಸಿದರು. ಅಷ್ಟೇ ಅಲ್ಲದೇ 250 ಸಿನಿಮಾಗಳಲ್ಲಿಯೂ ನಟಿಸಿ ತಮ್ಮದೇ ಛಾಪು ಮೂಡಿಸಿದರು.
ಆದರೆ ಇಂದ್ರಜಿತ್ ನಿರ್ದೇಶನದ ಶಕೀಲಾ ಸಿನಿಮಾದ ಟ್ರೈಲರ್ ನಲ್ಲಿ ಹೆಚ್ಚು ಹೇಳಿಕೊಳ್ಳುವ ಅಂಶಗಳಾವುವೂ ಕಾಣಿಸದೇ ಪಂಕಜ್ ತ್ರಿಪಾಠಿ ಅವರೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ಹೀಗಾಗಿದ್ದು ಸಿನಿಮಾದಲ್ಲಿ ಉತ್ತಮ ಕಥೆ ಇರಬಹುದೆಂಬ ವಿಶ್ವಾಸವಿದೆ. ಸ್ಯಾಮಿ ನನ್ವಾನಿ ಮತ್ತು ಸಾಹಿಲ್ ನನ್ವಾನಿ ಸಿನಿಮಾ ನಿರ್ಮಾಣ ಮಾಡಿದ್ದು, ಮೀಟ್ ಬ್ರೋಸ್ ಹಾಗೂ ವೀರ್ ಸಮರ್ಥ್ ಸಂಗೀತವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


