ಚಲನಚಿತ್ರ ಪೋಷಕ ಕಲಾವಿದರು, ಕಾರ್ಮಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನದಿಂದ ನೆರವು
ಕೊರೋನಾ ಸೋಂಕಿನಿಂದ ನಲುಗಿಹೋಗಿರುವ ಚಲನಚಿತ್ರ ಪೋಷಕ ಕಲಾವಿದರು ಹಾಗೂ ಕಾರ್ಮಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನ ಆಹಾರ ಕಿಟ್‌ಗಳ ವಿತರಣೆ ಮಾಡುವ ಮೂಲಕ ಕಲಾವಿದರ ನೆರವಿಗೆ ಧಾವಿಸಿದೆ.

ಬೆಂಗಳೂರು: ಕೊರೋನಾ ಸೋಂಕಿನಿಂದ ನಲುಗಿಹೋಗಿರುವ ಚಲನಚಿತ್ರ ಪೋಷಕ ಕಲಾವಿದರು ಹಾಗೂ ಕಾರ್ಮಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನ ಆಹಾರ ಕಿಟ್‌ಗಳ ವಿತರಣೆ ಮಾಡುವ ಮೂಲಕ ಕಲಾವಿದರ ನೆರವಿಗೆ ಧಾವಿಸಿದೆ.
ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಕಷ್ಟದಲ್ಲಿರುವವರಿಗೆ ಮನಮಿಡಿಯುವ ರೀತಿ ಹಾಗೂ ಬಡವರ ಬಗ್ಗೆ ಅವರಿಗಿರುವ ಕಾಳಜಿ ಅನುಕರಣೀಯ ಎಂದು ನಟಿ ಪ್ರೇಮಾ ಅವರು ಹೇಳಿದ್ದಾರೆ.
ನಗರದ ಸುಚಿತ್ರಾ ಫಿಲಂ ಸೊಸೈಟಿಯ ಆವರಣದಲ್ಲಿ ಚಲನಚಿತ್ರ ಪೋಷಕ ಕಲಾವಿದರು ಮತ್ತು ಕಾರ್ಮಿಕರುಗಳಿಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಷ್ಟಕ್ಕೆ ಮನಮಿಡಿಯುವ ಹಾಗೂ ಅಗತ್ಯವಿರವವರಿಗೆ ವಿಶೇಷ ಕಾಳಜಿ ತೋರಿಸುವ ಸುಧಾಮೂರ್ತಿಯವರ ಸಂಸ್ಥೆಯಿಂದ ಕೊಡಲಾಗುತ್ತಿರುವ ಜೀವನಾವ್ಯವಕ ವಸ್ತುಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಪ್ರೇಮಾ ಹೇಳಿದರು.
ಸಿನಿಮಾ ಕಾರ್ಮಿಕರು ಚಿತ್ರೀಕರಣ ನಿಲುಗಡೆಯಾದ ಪರಿಣಾಮ ಬಹಳಷ್ಟು ತೊಂದರೆಗೀಡಾಗಿದ್ದರು. ಇವರಿಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಗುತ್ತಿದ್ದು, ಅವರ ಕುಟುಂಬ ಪೋಷಣೆಗೆ ಇದು ಅಗತ್ಯವಾಗಿದೆ ಎಂದರು.
ಕರ್ನಾಟಕ ಚಲನ ಚಿತ್ರ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಮಾತನಾಡಿ, ''ನನಗೆ ಅಮ್ಮ ಸುಧಾಮೂರ್ತಿ ಅವರ ಸಂಪರ್ಕ ಇರಲಿಲ್ಲ. ಎರಡನೇ ಬಾರಿ ನಾನು ಮಾಡಿದ ಎಸ್ ಎಂ ಎಸ್ ನೋಡಿ ಸುಧಾಮೂರ್ತಿ ಅವರೇ ಫೋನ್ ಮಾಡಿದ್ದರು. ಎಷ್ಟು ಜನರು ಸಂಕಷ್ಟದಲ್ಲಿದ್ದಾರೆ ಹಾಗೂ ಎಷ್ಟು ಕಿಟ್ ಗಳ ಅವಶ್ಯಕತೆ ಇದೆ ಎನ್ನುವುದನ್ನ ಸ್ವತಃ ಅವರೇ ವಿಚಾರಿಸಿಕೊಂಡರು.
ಲಾಕ್‌ಡೌನ್ ಸಂಧರ್ಬದಲ್ಲಿ 2 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ, ಕಾರ್ಮಿಕರಿಗೆ ಪ್ರತಿಷ್ಠಾನದ ವತಿಯಿಂದ ಕಿಟ್ ವಿತರಿಸಲಾಗಿತ್ತು. ಆ ವೇಳೆ ಅರ್ಹ ಕಲಾವಿದರಿಗೆ ಸಿಕ್ಕಿಲ್ಲ ಎನ್ನುವ ಮನವಿಯ ಹಿನ್ನಲೆಯಲ್ಲಿ ಇಂದು ಮತ್ತೆ ಒಂದು ಸಾವಿರ ಮಂದಿಗೆ ನೆರವು ನೀಡಲಾಗಿದೆ'' ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


