ಸಿನಿಮಾ ಸುದ್ದಿ

ಆರ್‌ಆರ್‌ಆರ್‌ ಸೆಟ್'ಗೆ ಕಾಲಿಟ್ಟ ನಟಿ ಆಲಿಯಾ ಭಟ್ ಗೆ ನಿರ್ದೇಶಕ ರಾಜಮೌಳಿ ಸ್ವಾಗತ!

ಎಸ್ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌ ಚಿತ್ರೀಕರಣಕ್ಕೆ ಭರದಿಂದ ಸಾಗುತ್ತಿದ್ದು, ಇದೀಗ ನಟಿ ಆಲಿಯಾ ಭಟ್ ಕೂಡ ತಂಡ ಸೇರಿಕೊಂಡಿದ್ದಾರೆ.

ಆರ್‌ಆರ್‌ಆರ್‌ ಸೆಟ್'ಗೆ ಕಾಲಿಟ್ಟ ನಟಿ ಆಲಿಯಾ ಭಟ್ ಗೆ ನಿರ್ದೇಶಕ ರಾಜಮೌಳಿ ಸ್ವಾಗತ!
ಆಲಿಯಾ ಭಟ್, ನಿರ್ದೇಶಕ ರಾಜಮೌಳಿ
Published On :

ಎಸ್ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌ ಚಿತ್ರೀಕರಣಕ್ಕೆ ಭರದಿಂದ ಸಾಗುತ್ತಿದ್ದು, ಇದೀಗ ನಟಿ ಆಲಿಯಾ ಭಟ್ ಕೂಡ ತಂಡ ಸೇರಿಕೊಂಡಿದ್ದಾರೆ. 

ಆಲಿಯಾ ಭಟ್ ಅವರು ಚಿತ್ರೀಕರಣ ಸೆಟ್'ಗೆ ಬಂದಿರುವ ಕುರಿತು ರಾಜಮೌಳಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

ನಮ್ಮ ಪ್ರೀತಿಯ #ಸೀತಾಗೆ, ಅತ್ಯಂತ ಪ್ರತಿಭಾವಂತ ಮತ್ತು ಸುಂದರವಾದ ಆಲಿಯಾ ಭಟ್ ಅವರಿಗೆ #ಆರ್‌ಆರ್‌ಆರ್‌ ಚಿತ್ರದ ಸೆಟ್‌'ಗೆ ಸ್ವಾಗತ! ಎಂದು ರಾಜಮೌಳಿಯವರು ಬರೆದುಕೊಂಡಿದ್ದಾರೆ. 

ಆಲಿಯಾ ಭಟ್ ಅವರಿಗೆ ಆರ್‌ಆರ್‌ಆರ್‌ ಮೊದಲ ತೆಲುಗು ಸಿನಿಮಾ ಆಗಿದೆ. ಆರ್‌ಆರ್‌ಆರ್‌ ಸಿನಿಮಾಗೆ ಆಲಿಯಾ ಭಟ್ ಅವರು ಆಯ್ಕೆಯಾಗಿದ್ದಾರೆಂಬ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಚಿತ್ರದಲ್ಲಿ ಆಲಿಯಾ ಭಟ್ ಅವರ ಪಾತ್ರ ಹೇಗಿರಬಹುದು ಎಂಬುದು ಹಲವರ ಕುತೂಹಲ ಕೂಡ ಆಗಿದೆ. 

ಲಾಕ್ಡೌನ್ ಪರಿಣಾಮ ಸುಮಾರು 7-8 ತಿಂಗಳ ಕಾಲ ಚಿತ್ರದ ಚಿತ್ರೀಕರಣವನ್ನು ಬಂದ್ ಮಾಡಲಾಗಿತ್ತು. ಆದರೆ, ಇದೀಗ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ನಟಿ ಆಲಿಯಾ ಭಟ್ ಅವರು ಚಿತ್ರದ ಸೆಟ್'ಗೆ ಆಗಮಿಸಿರುವುದು ಚಿತ್ರೀಕರಣಕ್ಕೆ ಬಲ ಹೆಚ್ಚಾದಂತಾಗಿದೆ. ಈಗಾಗಲೇ ರಾಜಮೌಳಿಯವರು ಮಹಾಬಲೇಶ್ವರದಲ್ಲಿ ಒಂದು ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. 

ಆರ್‌ಆರ್‌ಆರ್‌ ಚಿತ್ರದಲ್ಲಿ ನಟ ರಾಮ್ ಚರಣ್ ಅವರು ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಕಾಣಿಸಿಕೊಂಡರೆ, ನಟಿ ಆಲಿಯಾ ಭಟ್ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಆಲಿಯಾ ರಾಮ್ ಚರಣ್ ಜೋಡಿಯಾಗಿ ನಟಿಸಲಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.