'ಕನ್ನಡಿಗ' ದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಗೆಳೆಯನಾದ ರಾಕ್‌ಲೈನ್ ವೆಂಕಟೇಶ್!
ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕ ಬಿ.ಎಂ.ಗಿರಿರಾಜ್ ಅವರ "ಕನ್ನಡಿಗ" ಚಿತ್ರದ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ಮಾಪಕ-ನಟ ರಾಕ್‌ಲೈನ್ ವೆಂಕಟೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕ ಬಿ.ಎಂ.ಗಿರಿರಾಜ್ ಅವರ "ಕನ್ನಡಿಗ" ಚಿತ್ರದ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ಮಾಪಕ-ನಟ ರಾಕ್‌ಲೈನ್ ವೆಂಕಟೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇದೀಗ ಬಂದ ಹೊಸ ಸುದ್ದಿ.
ಪತ್ರಿಕೆಯೊಂದಿಗೆ ಚಿತ್ರತಂಡ ಹಂಚಿಕೊಂಡಿರುವ ಇತ್ತೀಚಿನ ಸ್ಟಿಲ್, ವಿದ್ವಾಂಸ ಮತ್ತು ಯೋಧ ಸಮಂತಭದ್ರ ಪಾತ್ರದಲ್ಲಿಕ್ರೇಜಿಸ್ಟಾರ್ ವಿ, ರವಿಚಂದ್ರನ್ ಅವರನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಸ್ನೇಹಿತನ ಪಾತ್ರದಲ್ಲಿ ನಿರ್ಮಾಪಕ ರಾಕ್‌ಲೈನ್ ಕಾಣಿಸಿಕೊಳ್ಳುತ್ತಿದ್ದಾರೆ.ಇದಕ್ಕೆ ಹಿಂದೆ "ರಸಿಕ" ಚಿತ್ರದಲ್ಲಿ ರವಿಚಂದ್ರನ್ ಹಾಗೂ ರಾಕ್‌ಲೈನ್ ವೆಂಕಟೇಶ್ ಒಟ್ಟಾಗಿ ತೆರೆ ಮೇಲೆ ಅಭಿನಯಿಸಿದ್ದರು.
ರವಿಚಂದ್ರನ್ ನಿರ್ದೇಶನದ "ಪ್ರೀತ್ಸೋದ್ ತಪ್ಪಾ?" ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದರು.
ಎನ್ ಎಸ್ ರಾಜ್‌ಕುಮಾರ್ ನಿರ್ಮಿಸಿದ "ಕನ್ನಡಿಗ" ಚಿತ್ರದ ಮೂಲಕ ಜೇಮೀ ಆಲ್ಟರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.ಹಿರಿಯ ನಟ ಮತ್ತು ನಿರ್ದೇಶಕ ಚಿ ಗುರುದುತ್ ಸಹ ಪ್ರಮುಖ ಪಾತ್ರದಲ್ಲಿದ್ದುಜೊತೆಗೆ ಪವನ, ಜಯಶ್ರೀ ಮತ್ತು ಭವಾನಿ ಪ್ರಕಾಶ್ ಸಹ ಅಭಿನಯಿಸಿದ್ದಾರೆ.
ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಗಿರಿರಾಜ್ ಎಡಿಟಿಂಗ್ ಕೆಲಸ ಮುಗಿದ ನಂತರ ಉಳಿದ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ಯೋಜಿಸಿದ್ದಾರೆ. "ಕನ್ನಡಿಗ" ಗೆ ರವಿ ಬಸ್ರೂರು ಸಂಗೀತ ಜಿಎಸ್ವಿ ಸೀತಾರಾಮ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


