ಸಿನಿಮಾ ಸುದ್ದಿ

'ಸಲಗ' ಚಿತ್ರದ ಮಳೆಯೇ..ಮಳೆಯೇ ಹಾಡು ಪುನೀತ್ ರಾಜ್ ಕುಮಾರ್ ರಿಂದ ಸೆ.5ರಂದು ಬಿಡುಗಡೆ 

ದುನಿಯಾ ವಿಜಯ್ ನಿರ್ದೇಶನ ಮತ್ತು ನಾಯಕನಾಗಿರುವ ಸಲಗ ಚಿತ್ರದ ಮಳೆಯೆ ಮಳೆಯೆ ಹಾಡು ಸೆಪ್ಟೆಂಬರ್ 5ರಂದು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ.

'ಸಲಗ' ಚಿತ್ರದ ಮಳೆಯೇ..ಮಳೆಯೇ ಹಾಡು ಪುನೀತ್ ರಾಜ್ ಕುಮಾರ್ ರಿಂದ ಸೆ.5ರಂದು ಬಿಡುಗಡೆ 
ಸಲಗ ಚಿತ್ರದ ಸ್ಟಿಲ್, ಪುನೀತ್ ರಾಜ್ ಕುಮಾರ್
Published On :

ದುನಿಯಾ ವಿಜಯ್ ನಿರ್ದೇಶನ ಮತ್ತು ನಾಯಕನಾಗಿರುವ ಸಲಗ ಚಿತ್ರದ ಮಳೆಯೆ ಮಳೆಯೆ ಹಾಡು ಸೆಪ್ಟೆಂಬರ್ 5ರಂದು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. 

ನಿರ್ಮಾಪಕ ಕೆ ಪಿ ಶ್ರೀಕಾಂತ್ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಎ2 ಮ್ಯೂಸಿಕ್ ನಲ್ಲಿ ಹಾಡು ಬಿಡುಗಡೆಯಾಗುತ್ತಿದ್ದು ಮಲೆನಾಡು ಭಾಗಗಳಲ್ಲಿ ನಡೆದ ಚಿತ್ರೀಕರಣದ ಈ ಹಾಡಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ದುನಿಯಾ ವಿಜಯ್ ಮತ್ತು ಸಂಜನಾ ಆನಂದ್ ನಟಿಸಿದ್ದಾರೆ.ಸಂಜಿತ್ ಹೆಗಡೆ ಮತ್ತು ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ.

ಸಲಗ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಕೋವಿಡ್-19ನಿಂದಾಗಿ ಮುಂದೂಡಲ್ಪಟ್ಟಿದೆ. ದುನಿಯಾ ವಿಜಯ್ ಅವರ ಮೊದಲ ನಿರ್ದೇಶನದ ಚಿತ್ರ ಇದಾಗಿದ್ದು ಧನಂಜಯ್ ಪ್ರಮುಖ ಪಾತ್ರ ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.