ಎಸ್ಪಿಬಿ ಚೇತರಿಕೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ, ಮೆಸೇಜ್ಗಳ ಮಹಾಪೂರ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಚೇತರಿಕೆಗಾಗಿ ಚಲನಚಿತ್ರ ನಿರ್ದೇಶಕ ಭಾರತೀರಾಜ ಮತ್ತು ಚಲನಚಿತ್ರ ಭ್ರಾತೃತ್ವದ ಕರೆಯ ಮೇರೆಗೆ ಗಾಯಕನ ಅಭಿಮಾನಿಗಳು ಇಂದು ಸಂಜೆ 6 ಗಂಟೆಯಿಂದ 6.05ರವರೆಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಚೆನ್ನೈ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಚೇತರಿಕೆಗಾಗಿ ಚಲನಚಿತ್ರ ನಿರ್ದೇಶಕ ಭಾರತೀರಾಜ ಮತ್ತು ಚಲನಚಿತ್ರ ಭ್ರಾತೃತ್ವದ ಕರೆಯ ಮೇರೆಗೆ ಗಾಯಕನ ಅಭಿಮಾನಿಗಳು ಇಂದು ಸಂಜೆ 6 ಗಂಟೆಯಿಂದ 6.05ರವರೆಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಖ್ಯಾತ ನಟರಾದ ರಜನೀಕಾಂತ್, ಕಮಲ್ ಹಾಸನ್, ವೈರಮುತ್ತು ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಎ.ಆರ್. ರಹಮಾನ್, ಚಲನಚಿತ್ರ ನಟರು ಮತ್ತು ನಟಿಯರು, ನಿರ್ದೇಶಕರು, ಸಂಗೀತಗಾರರು, ಫೆಫ್ಸಿ ಸದಸ್ಯರು, ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು, ವಿತರಕರು ಮತ್ತು ಮಾಧ್ಯಮಗಳು ಮತ್ತು ಜಗತ್ತಿನಾದ್ಯಂತ ಕೋಟ್ಯಂತರ ಎಸ್ ಪಿಬಿ ಅಭಿಮಾನಿಗಳು ಅವರಿದ್ದ ಸ್ಥಳಗಳಲ್ಲಿ ಎಸ್ ಪಿಬಿ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದರು.
ಭಾರತೀಯ ಸಿನೆಮಾ ರಂಗದಲ್ಲಿ ಅವರು ಮೋಡಿಮಾಡುವ ಕಂಠಸಿರಿ ಮತ್ತು ವಿವಿಧ ಭಾಷೆಗಳಲ್ಲಿನ ಪಾಂಡಿತ್ಯಕ್ಕೆ ನಮನಗಳು. ಅವರು ಕೋವಿಡ್-19 ಸೋಂಕಿಗೆ ತುತ್ತಾಗಿರುವುದಕ್ಕೆ ಕಣ್ಣೀರು ತರಿಸಿದೆ ಎಂದು ಹೇಳಿರುವ ಭಾರತಿ ರಾಜ, ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಮತ್ತೆ ಕೇಳುವಂತೆ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.
ಈ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ತಮಿಳುನಾಡು ಆರೋಗ್ಯ ಸಚಿವ ಡಾ.ಸಿ.ವಿಜಯಬಾಸ್ಕರ್, ರಜನಿಕಾಂತ್ ಮತ್ತು ಚಲನಚಿತ್ರ ರಂಗದ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಗಾಯಕನ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


