ಎಸ್ ಪಿ ಬಾಲಸುಬ್ರಹ್ಮಣ್ಯಂ

ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ 76ನೇ ಜಯಂತಿ: ಒಂದು ನೆನಪು
ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ ಸಂಕ್ಷಿಪ್ತವಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ, ಬಹುಶಃ ಇವರ ಹೆಸರು ಕೇಳದ ಭಾರತೀಯ ಸಂಗೀತ ಪ್ರೇಮಿಗಳು ಇರಲಿಕ್ಕಿಲ್ಲವೇನೊ? ಸಂಗೀತ ದಿಗ್ಗಜರು, ಸಹ ಗಾಯಕರ ಬಾಯಲ್ಲಿ ಬಾಲು, ಬಾಲು ಸರ್, ಬಾಲುಗಾರು ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.

ಗಾನ ಗಂಧರ್ವ ಎಸ್ ಪಿಬಿ ಪ್ರಥಮ ಪುಣ್ಯತಿಥಿ: ಗಣ್ಯರು, ಕಲಾವಿದರಿಂದ ಸ್ಮರಣೆ, ಗಾನಗಾರುಡಿಗನಿಗೆ ಭಕ್ತಿಯ ನಮನ
ಹಾಡುಗಳ ಮೂಲಕ ಕೋಟ್ಯಾಂತರ ಜನರನ್ನು ರಂಜಿಸಿದ ಮಹಾನ್ ಗಾಯಕ, ಸರಿ ಸುಮಾರು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಎಲ್ಲರ ಮನಗೆದ್ದ ಸ್ವರ ಮಾಂತ್ರಿಕ, ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಮೊದಲ ಪುಣ್ಯಸ್ಮರಣೆ ಇಂದು.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನ್ಮದಿನ: ಗಾನಗಂಧರ್ವನ ಗುಣಗಾನ
ಜೂನ್ 4, ಸಂಗೀತ ಮಾಂತ್ರಿಕ, ಸ್ವರ ಸಾಮ್ರಾಟ, ಸಂಗೀತ ಕಲಾವಿದರ ಆರಾಧ್ಯ ದೈವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವ.

ಎಸ್‌ಪಿಬಿಗೆ 'ಭಾರತ ರತ್ನ' ನೀಡಿ: ಪಿಎಂ ಮೋದಿಗೆ ಆಂಧ್ರ ಸಿಎಂ ಜಗನ್ ಪತ್ರ
ಶುಕ್ರವಾರ ಚೆನ್ನೈನಲ್ಲಿ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಭಾರತ ರತ್ನ" ನೀಡುವಂತೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೇಂದ್ರವನ್ನು ಒತ್ತಾಯಿಸಿದೆ.

ಭೂ ತಾಯಿಯ ಮಡಿಲು ಸೇರಿದ ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸ್ವರ ಮಾಂತ್ರಿಕ, ನಟ, ಸಂಗೀತ ಸಂಯೋಜಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದೆ. ಸಾವಿರಾರು ಹಾಡುಗಳ ಸರದಾರ ಸಪ್ತ ಸ್ವರವೇರಿ ಗಾನ ಸರಸ್ವತಿಯ ಮಡಿಲು ಸೇರಿದ್ದಾರೆ.

'ಎಸ್ ಪಿಬಿ ನನಗೆ ಸೋದರ ಸಮಾನ': ಬೆಂಗಳೂರಿನ ಹೊಟೇಲ್ ಉದ್ಯಮಿ ಹಿರಿಜೀವ ಓಬಯ್ಯ
ಅದು 1981ರ ಸಮಯ, ಮದ್ರಾಸ್ ನಲ್ಲಿ ಎಸ್ ಪಿಬಿಯವರನ್ನು ಭೇಟಿ ಮಾಡಿದ್ದೆ, ನಮ್ಮ ನಡುವಿನ ಬಾಂಧವ್ಯ ಕಂಡು ಅವರ ತಂದೆ ನನ್ನನ್ನು ಅಣ್ಣಾ ಎಂದು ಸಂಬೋಧಿಸು ಎಂದು ಎಸ್ ಪಿಬಿಯವರಿಗೆ ಹೇಳಿದರು. ಎಸ್ ಪಿಬಿಯವರು ತಮ್ಮ ಹಿರಿಯ ಸೋದರನನ್ನು ಕಳೆದುಕೊಂಡಿದ್ದರು,ಅವರ ಸ್ಥಾನವನ್ನು ನಾನು ತುಂಬಿದೆ ಎಂದು ಎಸ್ ಪಿಬಿ ತಂದೆ ಭಾವಿಸಿದರು.

ಪೊಲೀಸ್ ಗೌರವಗಳೊಂದಿಗೆ ಎಸ್ ಪಿಬಿ ಅಂತ್ಯಕ್ರಿಯೆ: ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಬಾರದ ಲೋಕಕ್ಕೆ ಪ್ರಯಾಣಿಸಿರುವ ಗಾನ ಗಾರುಡಿಗ, ಪದ್ಮ ವಿಭೂಷಣ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ತಿಳಿಸಿದ್ದಾರೆ.

ಬಾರದೂರಿಗೆ ಹೊರಟು ನಿಂತ 'ಬಾಲು': ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಅಂತ್ಯಕ್ರಿಯೆ
ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರುತ್ತಿವೆ.

'ಗಾಯನ, ಬಿಡುವಿಲ್ಲದ ಕೆಲಸದ ಮಧ್ಯೆ ನನ್ನ ಮಕ್ಕಳು ದೊಡ್ಡವರಾಗುವುದನ್ನು ನೋಡಲಾಗಲಿಲ್ಲ': ಎಸ್ ಪಿಬಿ ನೋವಿನ ನುಡಿ
ನನ್ನ ಮಕ್ಕಳು ಬೆಳೆದು ದೊಡ್ಡವರಾಗುವುದನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ ಹೀಗೆಂದು ಹೇಳಿ ಪಶ್ಚಾತ್ತಾಪ ಪಟ್ಟುಕೊಂಡಿದ್ದರು ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ಲೋಕದ ದಂತಕಥೆ ಎಸ್ ಪಿ ಬಾಲಸುಬ್ರಹ್ಮಣ್ಯಂ.

