ಸಿನಿಮಾ ಸುದ್ದಿ

ನಿರಂಜನ ಸುಧೀಂದ್ರ ನಟನೆಯ ಸೂಪರ್ ಸ್ಟಾರ್  ಟೀಸರ್ ಗೆ ರಾಕಿ ಬಾಯ್ ಹಿನ್ನೆಲೆ ಧ್ವನಿ

ನಿರಂಜನ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸುತ್ತಿದ್ದು ಆಗಸ್ಟ್ 14 ರಂದು ಲಾಂಚ್ ಆಗಿದೆ.

ನಿರಂಜನ ಸುಧೀಂದ್ರ ನಟನೆಯ ಸೂಪರ್ ಸ್ಟಾರ್  ಟೀಸರ್ ಗೆ ರಾಕಿ ಬಾಯ್ ಹಿನ್ನೆಲೆ ಧ್ವನಿ
ಯಶ್
Published On :

ನಿರಂಜನ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸುತ್ತಿದ್ದು ಆಗಸ್ಟ್ 14 ರಂದು ಲಾಂಚ್ ಆಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕ ಮತ್ತು ಕೆಜಿಎಫ್ ಹೀರೋ ರಾಕಿ ಬಾಯ್ ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ,

ರಾಕಿಂಗ್ ಸ್ಟಾರ್ ಯಶ್ ಸೂಪರ್ ಸ್ಚಾರ್ ಸಿನಿಮಾ ಟೀಸರ್ ಗೆ ಧ್ವನಿ ನೀಡಿದ್ದಾರೆ, ಆಗಸ್ಟ್ 20 ರಂದು ನಿರಂಜನ್ ಹುಟ್ಟುಹಬ್ಬವಿದ್ದು, ಟೀಸರ್ ರಿಲೀಸ್ ಆಗಲಿದೆ.

ನಿರಂಜನ್ ಸಿನಿಮಾ ಹೆಸರು ಸೂಪರ್ ಸ್ಟಾರ್ ಎಂದು ಇಡಲಾಗಿದೆ. ಆರ್ ವಿಬಿ ಮತ್ತು ಮೈಲಾರಿ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣ ವಾಗುತ್ತಿದೆ, ನಿರಂಜನ್ ಇದರಲ್ಲಿ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾತ್ರಕ್ಕಾಗಿ ನಿರಂಜನ್ ಹಲವು ಬದಲಾವಣೆ ಮಾಡಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ, ಹೀಗಾಗಿ ಉಳಿದ ಪಾತ್ರಗಳ ಕಲಾವಿದರ ಆಯ್ಕೆಯಲ್ಲಿ ಚಿತ್ರ ತಂಡ ನಿರತವಾಗಿದೆ. ಇನ್ನೂ ನಾಯಕಿ ಕೂಡ ಆಯ್ಕೆಯಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.