ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಶೂಟಿಂಗ್ ಸೆಪ್ಟಂಬರ್ ನಿಂದ ಪುನಾರಂಭ
ಹಲವು ತಿಂಗಳಿನ ನಂತರ ಕನ್ನಡ ಸಿನಿಮಾ ರಂಗ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ, ಸೋಮವಾರದಿಂದ ಶಿವಣ್ಣ ನಟನೆಯ ಭಜರಂಗಿ-2 ಸಿನಿಮಾ ಶೂಟಿಂಗ್ ಆರಂಭಿಸುತ್ತಿದೆ.

ಹಲವು ತಿಂಗಳಿನ ನಂತರ ಕನ್ನಡ ಸಿನಿಮಾ ರಂಗ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ, ಸೋಮವಾರದಿಂದ ಶಿವಣ್ಣ ನಟನೆಯ ಭಜರಂಗಿ-2 ಸಿನಿಮಾ ಶೂಟಿಂಗ್ ಆರಂಭಿಸುತ್ತಿದೆ.
ಹೀಗಾಗಿ ಉಳಿದ ನಿರ್ದೇಶಕರೂ ಕೂಡ ಸಿನಿಮಾ ಶೂಟಿಂಗ್ ಗೆ ಮುಂದಾಗಿದ್ದಾರೆ. ಆರ್ ಚಂದ್ರು ನಿರ್ದೇಶನದ ಮೆಗಾ ಪ್ರಾಜೆಕ್ಟ್ ಕಬ್ಜ ಕೂಡ ಸೆಪ್ಟಂಬರ್ ತಿಂಗಳಿನಿಂದ ಪುನಾರಂಭಗೊಳ್ಳಿದೆ, ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಕಬ್ಜ ಸಿನಿಮಾದಲ್ಲಿ ಕಬೀರ್ ದುಲ್ಹನ್ ಸಿಂಗ್ ಮತ್ತು ಕೋಟಾ ಶ್ರೀನಿವಾಸ್ ನಟಿಸಿದ್ದು ಮೂವರು ಸೆಪ್ಟಂಬರ್ ತಿಂಗಳಿನಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ಸುದೀಪ್ ಅವರ ಫ್ಯಾಂಟಮ್ ಸಿನಿಮಾ ಶೂಟಿಂಗ್ ಜುಲೈ 16 ರಿಂದ ಆರಂಭವಾಗಿದೆ.ಕೆಜಿಎಫ್-2 ಮತ್ತು ಪೊಗರು ಸಿನಿಮಾಗಳು ಕೂಡ ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭಿಸಲಿವೆ.
ಮಿನರ್ವ ಮಿಲ್ ಬಳಿ ಕಬ್ಜ ಸಿನಿಮಾ ತಂಡ ದೊಡ್ಡ ಜೈಲಿನ ಸೆಟ್ ಹಾಕಿದೆ, ಈ ಸೆಟ್ ನಲ್ಲಿ ಮೇಜರ್ ಸಾಹಸ ಚಿತ್ರ ಶೂಟಿಂಗ್ ನಡೆಯಲಿದೆ, ಸುಮಾರು 20 ದಿನಗಳ ಕಾಲ ಶೂಟಿಂಗ್ ಈ ಜೈಲಿನ ಸೆಟ್ ನಲ್ಲಿ ನಡೆಯಲಿದೆ, ಸೆಪ್ಟಂಬರ್ ನಿಂದ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ ಎಂದು ನಿರ್ದೇಶಕ ಆರ್.ಚಂದ್ರು ಹೇಳಿದ್ದಾರೆ.
ಶೂಟಿಂಗ್ ಮುನ್ನ ಅಗತ್ಯವಿರುವ ಎಲ್ಲಾ ಮುಂಜಾಗರೂಕಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿರುವ ಚಂದ್ರು. ನನ್ನ ಮತ್ತು ಉಪೇಂದ್ರ ಕಾಂಬಿನೇಷನ್ ನ 2ನೇ ಸಿನಿಮಾ ಇದಾಗಿದೆ ಎಂದು ತಿಳಿಸಿದ್ದಾರೆ. ಐ ಲವ್ ಯೂ ಸಿನಿಮಾ ನಂತರ ಚಂದ್ರು ಮತ್ತು ಉಪೇಂದ್ರ ಮತ್ತೊಮ್ಮೆ ಒಂದಾಗಿದ್ದಾರೆ.
ಶ್ರೀ ಸಿದ್ದೇಶ್ವರ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿ ಎಂಟಿಬಿ ನಾಗರಾಜ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ಈ ಸಿನಿಮಾದಲ್ಲಿ ಉಪೇಂದ್ರ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ನಟಿಸಿದ್ದಾರೆ.
ಕಬ್ಜ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರೆ, ಕನ್ನಡದಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ತೆಲುಗು, ತಮಿಳು ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಡಬ್ ಆಗಲಿದೆ. ಮತ್ತು ಆ ಭಾಷೆಗಳಲ್ಲಿ ನವೀನ್, ಜಯಪ್ರಕಾಶ್, ಕಾಟ್ ರಾಜು, ಮತ್ತು ಸುಬ್ಬರಾಜು ಜೊತೆ ಅವಿನಾಶ್ ಹಾಗೂ ಎಂ ಕಾಮರಾಜ್ ನಟಿಸಲಿದ್ದಾರೆ. ಆದರೆ ಚಿತ್ರ ತಂಡ ಇನ್ನೂ ನಾಯಕಿ ಹೆಸರನ್ನು ಫೈನಲ್ ಮಾಡಿಲ್ಲ.
ಕಬ್ಜ ಸಿನಿಮಾಗೆ ರವಿ ಬಸ್ರೂರು ಸಂಗೀತ ಅರ್ಜುನ್ ಶೆಟ್ಟಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಕಬ್ಜದ ಜೊತೆಗೆ ಉಪೇಂದ್ರ ಬುದ್ದಿವಂತ-2, ಹೋಮ್ ಮಿನಿಸ್ಟರ್ ರವಿ ಚಂದ್ರ, ಮುಂತಾದ ಸಿನಿಮಾಗಳಲ್ಲು ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


