ಹ್ಯಾಕರ್ಸ್'ಗಳ ಮುಷ್ಠಿಯಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಫೇಸ್'ಬುಕ್ ಖಾತೆ...!
ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ನಟ ಹಾಗೂ ನಟಿಯರಿಗೆ ಹ್ಯಾಕರ್ಸ್ ಗಳು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತಮ್ಮ ಖಾತೆಗಳನ್ನು ಕಾಪಾಡಿಕೊಳ್ಳುವುದು ಸೆಲೆಬ್ರಿಟಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ನಟ ಹಾಗೂ ನಟಿಯರಿಗೆ ಹ್ಯಾಕರ್ಸ್ ಗಳು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತಮ್ಮ ಖಾತೆಗಳನ್ನು ಕಾಪಾಡಿಕೊಳ್ಳುವುದು ಸೆಲೆಬ್ರಿಟಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಅವರ ಫೇಸ್ ಬುಕ್ ಖಾತೆ ಪ್ರಸ್ತುತ ಹ್ಯಾಕರ್ಸ್ ಗಳ ಕಪಿಮುಷ್ಟಿಯಲ್ಲಿದ್ದು, ಸ್ವತಃ ನಟಿ ಈ ಮಾಹಿತಿಯನ್ನು ನೀಡಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯ ಹ್ಯಾಕ್ ಆಗಿದೆ ಎಂದು ಶಾನ್ವಿ ಶ್ರೀವಾಸ್ತವ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು, ಇದನ್ನು ಆದಷ್ಟು ಬೇಗ ಸರಿ ಮಾಡಲಿರುವುದಾಗಿ ಶಾನ್ವಿ ತಿಳಿಸಿದ್ದಾರೆ. ಫೇಸ್ ಬುಕ್ ಖಾತೆ ನೋಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ಲಿಂಕ್ ವೊಂದನ್ನು ಆಕಸ್ಮಿಕವಾಗಿ ಕ್ಲಿಕ್ ಮಾಡಿದ್ದೆ. ಕೂಡಲೇ ನನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಯಿತು.
ನನ್ನ ಖಾತೆ ಹ್ಯಾಕ್ ಆಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ನನ್ನ ಪ್ರೊಫೈಲ್ ನಿಂದ ಅವರು ಹಣ ಪಡೆಯುತ್ತಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ನಮ್ಮ ಪೋಸ್ಟ್'ಗೆ ಬರುವ ಪ್ರತೀ ಲೈಕ್, ಫಾಲೋವರ್ಸ್ ಗಳಿಂದ ನಮಗೆ ಹಣ ಬರುತ್ತದೆ. ಇದನ್ನು ಗಮನಿಸಿರುವ ಹ್ಯಾಕರ್ಸ್ ಗಳು, ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಇದು ಒಳ್ಳೆಯದಲ್ಲ. ಮತ್ತೆ ಖಾತೆಯನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಯತ್ನಿಸಿದೆ ಅದು ಸಾಧ್ಯವಾಗಿಲ್ಲ. ಇದು ಕಲಿಕೆಯ ಅನುಭವವಾಗಿದೆ. ಲಾಕ್ಡೌನ್ ಸಾಕಷ್ಟು ಕಲಿಸಿದೆ ಎಂದು ಶಾನ್ವಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


