ಸಿನಿಮಾ ಸುದ್ದಿ

ಲಾಕ್​ಡೌನ್​ ಮಧ್ಯೆ ಅಕ್ರಮ ಮದ್ಯ ಮಾರಾಟ ನಡೆಸಿದ್ದ ತಮಿಳು ನಟ ಅರೆಸ್ಟ್!

ಕೊರೋನಾವೈರಸ್ ಲಾಕ್‌ಡೌನ್ ಇರುವ ಕಾರಣ ದೇಶಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ.ಇದರಿಂದ ಮದ್ಯವ್ಯಸನಿಗಳು ಬಹುಪಾಲು ಕಷ್ಟಕ್ಕೀಡಾಗಿದ್ದಾರೆ.ಈ ನಡುವೆ ತಮಿಳು ನಟನೊಬ್ಬ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ನಡೆಸಿ ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ.

ಲಾಕ್​ಡೌನ್​ ಮಧ್ಯೆ ಅಕ್ರಮ ಮದ್ಯ ಮಾರಾಟ ನಡೆಸಿದ್ದ ತಮಿಳು ನಟ ಅರೆಸ್ಟ್!
ತಮಿಳು ನಟ ರಿಜ್ವಾನ್
Published On :

ಚೆನ್ನೈ: ಕೊರೋನಾವೈರಸ್ ಲಾಕ್‌ಡೌನ್ ಇರುವ ಕಾರಣ ದೇಶಾದ್ಯಂತ ಮದ್ಯ ಮಾರಾಟ ಬಂದ್ ಆಗಿದೆ.ಇದರಿಂದ ಮದ್ಯವ್ಯಸನಿಗಳು ಬಹುಪಾಲು ಕಷ್ಟಕ್ಕೀಡಾಗಿದ್ದಾರೆ.ಈ ನಡುವೆ ತಮಿಳು ನಟನೊಬ್ಬ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ನಡೆಸಿ ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ.

ವಿವಾದಾತ್ಮಕ ಚಿತ್ರ 'ದ್ರೌಪದಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ತಮಿಳು ನಟ ರಿಜ್ವಾನ್ ಅವರನ್ನು ಎಂಜಿಆರ್ ನಗರ ಪ್ರದೇಶದಲ್ಲಿ ಕಳೆದ ರಾತ್ರಿ ಮದ್ಯ ಸಂಗ್ರಹಿಸಿ ತಮ್ಮ ಸಹೋದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ಬಂಧಿತನಿಂದ  180 ಮಿಲಿ ಮದ್ಯದ 57 ಬಾಟಲಿಗಳು ಮತ್ತು 12 ಬಾಟಲ್ ಬಿಯರ್ ಜೊತೆಗೆ 2300 ರೂಪಾಯಿ ನಗದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

ಫಿಲ್ಮ್​​ ಪ್ರೊಡಕ್ಷನ್​ ನೌಕರನಾದ ಪ್ರದೀಪ್ ಎಂಬಾತನಿಂದ 000 ರೂ.ಗೆ ಒಂದು ಬಾಟಲಿಯನ್ನು ಖರೀದಿಸಿ 1200 ರೂಪಾಯಿಗೆ ತನ್ನ ಸ್ನೇಹಿತರಿಗೆ ಮಾರಿರುವುದಾಗಿ ಆರೋಪಿ ನಟ ರಿಜ್ವಾನ್ ತಪ್ಪೊಪ್ಪಿಕೊಂಡಿದ್ದಾರೆ.

ನಟ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಪ್ರದೀಪ್ ಮತ್ತು ಅವರ ಚಾಲಕ ದೇವರಾಜ್ ನನ್ನೂ ಬಂಧಿಸಿದ್ದಾರೆ.ಅವರಿಂದ  189 ಬಾಟಲಿಗಳು ಮತ್ತು 20 ಸಾವಿರ ರೂಪಾಯಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಮಧ್ಯೆ ದೇವರಾಜ್ ಮತ್ತು ಪ್ರದೀಪ್ ಮದ್ಯವನ್ನು ಎಲ್ಲಿಂದ ಸಂಗ್ರಹಿಸಿದ್ದಾರೆ ಎಂಬ ಕುರಿತು ತನಿಖೆ ನಡೆಯುತ್ತಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.