ಸಿನಿಮಾ ಸುದ್ದಿ

ಚಿತ್ರರಂಗಕ್ಕೆ ಕೊರೋನಾ ವಿರಾಮ: ಚಿತ್ರಕಥೆ ಬರೆಯುವಲ್ಲಿ ಬ್ಯುಸಿಯಾದ ನಿರ್ದೇಶಕ ಸುನಿ

ಕೊರೋನಾ ಮಹಾಮಾರಿಯಿಂದ ಕನ್ನಡ ಚಿತ್ರರಂಗವೇ ಸ್ಥಬ್ದವಾಗಿದೆ. ಇನ್ನು ಕೆಲ ನಿರ್ದೇಶಕರು ಇದೇ ಸಮಯವನ್ನು ಚಿತ್ರಕಥೆಗಳನ್ನು ಬರೆಯಲು ಉಪಯೋಗಿಸಿಕೊಳ್ಳುತ್ತಿದ್ದಾರೆ.

ಚಿತ್ರರಂಗಕ್ಕೆ ಕೊರೋನಾ ವಿರಾಮ: ಚಿತ್ರಕಥೆ ಬರೆಯುವಲ್ಲಿ ಬ್ಯುಸಿಯಾದ ನಿರ್ದೇಶಕ ಸುನಿ
ಸುನಿ
Published On :

ಕೊರೋನಾ ಮಹಾಮಾರಿಯಿಂದ ಕನ್ನಡ ಚಿತ್ರರಂಗವೇ ಸ್ಥಬ್ದವಾಗಿದೆ. ಇನ್ನು ಕೆಲ ನಿರ್ದೇಶಕರು ಇದೇ ಸಮಯವನ್ನು ಚಿತ್ರಕಥೆಗಳನ್ನು ಬರೆಯಲು ಉಪಯೋಗಿಸಿಕೊಳ್ಳುತ್ತಿದ್ದಾರೆ. 

ಹೌದು, ಸಿಂಪಲ್ ಸುನಿ ಶರಣ್ ಅಭಿನಯದ ಅವತಾರ ಪುರುಷ ಮತ್ತು ಗಣೇಶ್ ಅಭಿನಯದ ಸಖತ್ ಚಿತ್ರಗಳ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಧಗಿತಗೊಂಡಿರುವುದರಿಂದ ಸುನಿ ಅವರು ಇದೀಗ ಚಿತ್ರಕಥೆ ಬರೆಯುವಲ್ಲಿ ಬ್ಯುಸಿಯಾಗಿದ್ದಾರೆ. 

ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮತ್ತು ಚಮಕ್ ಚಿತ್ರಗಳನ್ನು ನಿರ್ಮಿಸಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಂದಿನ ಚಿತ್ರಕ್ಕೆ ಸುನಿ ಚಿತ್ರಕಥೆ ಬರೆಯುತ್ತಿದ್ದಾರೆ. 

ಅವತಾರ ಪುರುಷ ಚಿತ್ರದ ಹಾಡು ಹಾಗೂ ಒಂದು ಫೈಟ್ ಚಿತ್ರೀಕರಣ ಬಾಕಿಯಿದೆ. ಇನ್ನು 12 ದಿನದ ಸಖತ್ ಚಿತ್ರದ ಚಿತ್ರೀಕರಣ ನಡೆದಿತ್ತು. 

ಕೊರೋನಾ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ 21 ದಿನಗಳ ಬಳಿಕ ಇದೀಗ ಮತ್ತೆ 19 ದಿನಗಳ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.