ಸಿನಿಮಾ ಸುದ್ದಿ

ನಟಿ ರಮ್ಯಾ ಟ್ವಿಟರ್ ಖಾತೆ ಮತ್ತೆ ಆ್ಯಕ್ಟಿವ್!

ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ನಾಪತ್ತೆಯಾಗಿದ್ದ ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಅವರ ಟ್ವಿಟರ್ ಖಾತೆ ಮತ್ತೆ ಆ್ಯಕ್ಟಿವ್ ಆಗಿದೆ.

ನಟಿ ರಮ್ಯಾ ಟ್ವಿಟರ್ ಖಾತೆ ಮತ್ತೆ ಆ್ಯಕ್ಟಿವ್!
ಸಂಗ್ರಹ ಚಿತ್ರ
Published On :

ಬೆಂಗಳೂರು: ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ನಾಪತ್ತೆಯಾಗಿದ್ದ ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಅವರ ಟ್ವಿಟರ್ ಖಾತೆ ಮತ್ತೆ ಆ್ಯಕ್ಟಿವ್ ಆಗಿದೆ.

ಹೌದು.. ನಟಿ ಹಾಗೂ ಮಂಡ್ಯದ ಮಾಜಿ ಸಂಸದೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಗಳ ಕಡೆ ಮುಖ ಮಾಡಿದ್ದು, ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದೊಂದು ವರ್ಷದದಿಂದ ರಮ್ಯಾ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಇದೀಗ ಅವರ ಟ್ವಿಟರ್‌ ಖಾತೆ ಆಕ್ಟೀವ್  ಆಗಿದ್ದು, ದಿವ್ಯಸ್ಪಂದನ/ರಮ್ಯಾ (https://twitter.com/divyaspandana) ಮತ್ತೆ ಟ್ವಿಟರ್‌ಗೆ ಮರಳಿರುವುದಕ್ಕೆ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಆದರೆ ಖಾತೆ ಆ್ಯಕ್ಟಿವೇಟ್ ಆಗಿದ್ದರೂ ರಮ್ಯಾ ಮಾತ್ರ ಈ ವರೆಗೂ ಯಾವುದೇ ಟ್ವೀಟ್ ಮಾಡಿಲ್ಲ.

ಕಳೆದ ವರ್ಷ ರಮ್ಯಾ ಟ್ವಿಟರ್‌ ಖಾತೆ ಡಿಲೀಟ್‌ ಮಾಡಿದ್ದಾರೆ ಎಂಬ ಸುದ್ದಿಗಳು ವರದಿಯಾಗಿತ್ತು. ಅಲ್ಲದೆ 2019ರ ಜೂನ್‌ 1ರಂದು ಅವರು ಕೊನೆಯ ಟ್ವೀಟ್‌ ಮಾಡಿದ್ದರು. ಕಳೆದೊಂದು ವರ್ಷದಲ್ಲಿ ರಮ್ಯಾ ಎಲ್ಲಿದ್ದರೂ ಎಂಬುದರ ಬಗ್ಗೆಯೂ ಯಾವುದೇ ಮಾಹಿತಿಗಳು ಇರಲಿಲ್ಲ. ಅವರು  ದುಬೈ ಅಥವಾ ಲಂಡನ್‌ನಲ್ಲಿ ನೆಲೆಸಿದ್ದಾರೆ ಎನ್ನಲಾಗಿತ್ತು.

ಕನ್ನಡ ಸಿನಿಮಾ ರಂಗದಲ್ಲಿ ನಂಬರ್‌ 1 ನಟಿಯಾಗಿದ್ದ ರಮ್ಯಾ 2016ರ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ನಾಗರಹಾವು ಅವರು ನಟಿಸಿದ ಕೊನೆಯ ಸಿನಿಮಾ. ನಂತರ ರಾಜಕರಾಣಕ್ಕೆ ಬಂದ ರಮ್ಯಾ ಕಾಂಗ್ರೆಸ್ ಪಕ್ಷ ಸೇರಿ ಸಂಸದೆಯಾಗಿ ಆಯ್ಕೆಯಾಗಿ ಕೆಲಸ  ಮಾಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಪ್ರಧಾನಿ ಮೋದಿ ಅವರಿಗೆ ಟ್ವೀಟ್‌ಗಳ ಮೂಲಕ ಟಾಂಗ್ ಕೊಟ್ಟು ರಮ್ಯಾ ಸದಾ ಸುದ್ದಿಯಾಗುತ್ತಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.