ಸ್ಯಾಂಡಲ್ ವುಡ್ ಕಾಲಿಟ್ಟ ನಟ ಅಲ್ಲು ಅರ್ಜುನ್
ನಟ ಅಲ್ಲು ಅರ್ಜುನ್‌ಗೆ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಇತರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಅವರ ಪಯಣ ಸ್ಯಾಂಡಲ್‌ವುಡ್‌ನತ್ತಲೂ ಮುಂದುವರಿದಿದೆ.

ನಟ ಅಲ್ಲು ಅರ್ಜುನ್‌ಗೆ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಇತರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಅವರ ಪಯಣ ಸ್ಯಾಂಡಲ್‌ವುಡ್‌ನತ್ತಲೂ ಮುಂದುವರಿದಿದೆ.
ಏಪ್ರಿಲ್ 8 ಅಲ್ಲು ಅರ್ಜುನ್ ಜನ್ಮದಿನ. ಈ ಸಂದರ್ಭದಲ್ಲಿ ಅವರ ಮುಂದಿನ 'ಪುಷ್ಪ' ಸಿನಿಮಾದ ಫಸ್ಟ್‌ಲುಕ್ ಹಾಗೂ ಟೈಟಲ್ ಘೋಷಣೆ ಮಾಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾ ಕನ್ನಡದಲ್ಲೂ ಸಿದ್ಧಗೊಳ್ಳಲಿದೆ.
ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಸಿನಿಮಾವೊಂದು ಕನ್ನಡದಲ್ಲೂ ತಯಾರಾಗುತ್ತಿದೆ. 'ಪುಷ್ಪ' ತೆಲುಗು, ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಏಕಕಾಲದಲ್ಲಿ ನಿರ್ಮಾಣಗೊಂಡು ತೆರೆಗೆ ಬರಲಿದೆ.
'ಪುಷ್ಪ'ದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅವರಿಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ' ಐದು ಭಾಷೆಗಳಲ್ಲಿ ಬರಲಿದೆ. ಕಥಾನಾಯಕನ ಹೆಸರು 'ಪುಷ್ಪರಾಜ್' ಎಂದು ಇರುವುದರಿಂದ ಚಿತ್ರದ ಶೀರ್ಷಿಕೆ 'ಪುಷ್ಪ' ಎಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


