ದರ್ಶನ್ ರಾಬರ್ಟ್ ಗಾಗಿ ಜೈಶ್ರೀರಾಮ್ ಹಾಡಿದ ಶಂಕರ್ ಮಹಾದೇವನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದ್ದು ರಾಮನನ್ನು ಜಪಿಸುವಂತೆ ಮಾಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದ್ದು ರಾಮನನ್ನು ಜಪಿಸುವಂತೆ ಮಾಡಿದೆ.
ರಾಬರ್ಟ್.. ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಅಲ್ಲದೇ ‘ಬಾಕ್ಸ್ ಆಫೀಸ್ ಸುಲ್ತಾನ್’ ದರ್ಶನ್ ತುಂಬಾ ಇಂಟರೆಸ್ಟ್ ತೆಗೆದುಕೊಂಡು ನಟಿಸಿರೋ ಸಿನಿಮಾ. ವೈಯಕ್ತಿಕವಾಗಿ ದಚ್ಚುಗೂ ‘ರಾಬರ್ಟ್’ ಮೇಲೆ ದೊಡ್ಡ ನಿರೀಕ್ಷೆಗಳಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೇ.. ಏಪ್ರಿಲ್ 9ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ ಎಫೆಕ್ಟ್ನಿಂದಾಗಿ ರಿಲೀಸ್ ಮುಂದೂಡಿಕೆಯಾಗಿದೆ. ಈ ಗ್ಯಾಪ್ನಲ್ಲೇ ಚಿತ್ರತಂಡ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ.
ಈ ಹಿಂದೆ ರಿಲೀಸ್ ಆಗಿದ್ದ ‘ಶ್ರೀ ರಾಮ’ನ ಹಾಡನ್ನು ಹೊಸ ವರ್ಸನ್ನಲ್ಲಿ ಬಿಡುಗಡೆ ಮಾಡ್ತಿದೆ. ಲೆಜೆಂಡರಿ ಸಿಂಗರ್ ಶಂಕರ್ ಮಹಾದೇವನ್ ಹಾಡಿಗೆ ದನಿಯಾಗಿದ್ದಾರೆ. ಶ್ರೀ ರಾಮ ನವಮಿ ಅಂಗವಾಗಿ ಇಂದು ಸಾಂಗ್ ರಿಲೀಸ್ ಆಗ್ತಿದೆ ಎಂದು ಚಿತ್ರತಂಡ ತಿಳಿಸಿದೆ.
ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇದಸೇ……ರಘುನಾಥಾಯ……ಸೀತಾಯ ಪತಯೇ ನಮಃ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂದು ಮತ್ತೆ ಮುಂದುವರಿದಿದೆ. ತರುಣ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣವಿರೋ ರಾಬರ್ಟ್. ಮೇ 1ರಂದು ರಿಲೀಸ್ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


