ದಾಂಪತ್ಯ ಜೀವನಕ್ಕೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ಆ್ಯಂಡಿ, ಪ್ರೀತಿಸಿದ ಹುಡುಗಿಯ ಕೈಹಿಡಿಯಲಿರುವ ಆ್ಯಂಡ್ರೂ ಜಯಪಾಲ್
ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮಾಜಿ ಸ್ಪರ್ಧಿ ಆಂಡ್ರ್ಯೂ ಜಯಪಾಲ್ (ಆ್ಯಂಡಿ) ತಾವು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ತಮ್ಮ ಗೆಳತಿಯೊಡನೆ ವಿವಾಹವಾಗಲು ಆ್ಯಂಡಿ ಸಿದ್ದತೆ ನಡೆಸಿದ್ದಾರೆ.

ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮಾಜಿ ಸ್ಪರ್ಧಿ ಆಂಡ್ರ್ಯೂ ಜಯಪಾಲ್ (ಆ್ಯಂಡಿ) ತಾವು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ತಮ್ಮ ಗೆಳತಿಯೊಡನೆ ವಿವಾಹವಾಗಲು ಆ್ಯಂಡಿ ಸಿದ್ದತೆ ನಡೆಸಿದ್ದಾರೆ.
ಗೆಳತಿ ಜನನಿ ಗಣೇಶ್ ಅವರ ಜೊತೆ ವಿಇವಾಹವಾಗುತ್ತಿರುವ ಆ್ಯಂಡಿ ಹಾಗೂ ಜನನಿ ಅವರದು ವರ್ಷಗಳ ಗೆಳೆತನ. ನಾನು ಜನನಿ ಅವರಿಗೆ ಅತ್ಯಂತ ರೊಮ್ಯಾಂಟಿಕ್ ಆಗಿ ನನ್ನ ಪ್ರೀತಿಯನ್ನು ಪ್ರಪೋಸ್ ಮಾಡಿದ್ದೇನೆ ಎಂದು ಆ್ಯಂಡಿ ಹೇಳಿಕೊಂಡಿದ್ದಾರೆ.ಅಲ್ಲದೆ ಬರುವ 2020ರಲ್ಲಿ ನಾವಿಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದಾಗಿ ವಿವರಿಸಿದ್ದಾರೆ.
ಇದಾಗಲೇ ಇಬ್ಬರೂ ತಮ್ಮ ಪೋಷಕರ ಬಳಿ ಮಾತನಾಡಿ ಮದುವೆಗೆ ಒಪ್ಪಿಗೆ ದೊರಕಿಸಿಕೊಂಡಿದ್ದಾರೆ.
ಆ್ಯಂಡಿ ಗೆಳತಿ ಜನನಿ ಬೆಂಗಳೂರಿನ ಎಂಎನ್ಸಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಆ್ಯಂಡಿ ಸಧ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಲ್ ನಮ್ದು, ದುಡ್ಡು ನಿಮ್ದು’ ಕಾರ್ಯಕ್ರಮ ನಿರೂಪಕರಾಗಿದ್ದಾರೆ. ಇನ್ನು ಆ್ಯಂಡಿ ತಮ್ಮ ಮದುವೆಗೆ ಮುನ್ನ ತನ್ನ ದೇಹತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಮ್ಗೆ ಹೋಗಿ ಕಸರತ್ತು ನಡೆಸಿದ್ದಾರೆ.ಇದರಿಂದ ಇದುವರೆಗೆ 27 ಕೆಜಿ ತೂಕವನ್ನು ಇಳಿಸಿಕೊಂಡಿರುವುದಾಗಿ ಅವರು ಹೇಳೀದ್ದಾರೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


