ಸಿನಿಮಾ ಸುದ್ದಿ

ಬುದ್ದಿವಂತ 2: ವಿಶಿಷ್ಟ ಲುಕ್ ನಿಂದ ಅಭಿಮಾನಿಗಳಿಗೆ 'ಶಾಕ್' ಕೊಡಲು ಉಪೇಂದ್ರ ತಯಾರು!

ಸೆಪ್ಟೆಂಬರ್ 18-ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನ. ಇದಕ್ಕಾಗಿ ಇಂದು ಮಧ್ಯರಾತ್ರಿ ಗಡಿಯಾರ 12 ಹೊಡೆಯುತ್ತಿದ್ದಂತೆ "ಬುದ್ದಿವಂತ 2" ಚಿತ್ರತಂಡ ನಾಯಕ ನಟನ ವಿಶಿಷ್ಟ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಉಪೇಂದ್ರ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ.

ಬುದ್ದಿವಂತ 2: ವಿಶಿಷ್ಟ ಲುಕ್ ನಿಂದ ಅಭಿಮಾನಿಗಳಿಗೆ 'ಶಾಕ್' ಕೊಡಲು ಉಪೇಂದ್ರ ತಯಾರು!
ಬುದ್ದಿವಂತ 2
Published On :

ಸೆಪ್ಟೆಂಬರ್ 18-ರಿಯಲ್ ಸ್ಟಾರ್ ಉಪೇಂದ್ರ ಜನ್ಮದಿನ. ಇದಕ್ಖಾಗಿ ಇಂದು ಮಧ್ಯರಾತ್ರಿ ಗಡಿಯಾರ 12 ಹೊಡೆಯುತ್ತಿದ್ದಂತೆ "ಬುದ್ದಿವಂತ 2" ಚಿತ್ರತಂಡ ನಾಯಕ ನಟನ ವಿಶಿಷ್ಟ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಮೂಲಕ ಉಪೇಂದ್ರ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದೆ.ಇನ್ನು ಈ ದಿನ ಸಂಜೆ ಉಪ್ಪಿ ತಮ್ಮ  ಕ್ರಿಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಮೋಶನ್ ಪೋಸ್ಟರ್ ಸಹ ಅನಾವರಣಗೊಳಿಸಲಿದ್ದಾರೆ.  

ನಟ, ನಿರ್ದೇಶಕ ಉಪ್ಪಿ ಆಗಾಗ್ಗೆ ತಮ್ಮ ಶೈಲಿ ಮತ್ತು ಹೊಸ ಲುಕ್ ಗಳಿಂದ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತಾ ಬಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಪೋಸ್ಟರ್ ಹಾಲಿವುಡ್ ನ ಟಚ್ ಹೊಂದಿದ್ದು ಜತೆಜತೆಗೆ ಸ್ಥಳೀಯ ಅಂಶಗಳ ಟಚ್ ಸಹ ಇದೆ.ಅಲ್ಲದೆ ಇದೊಂದು ಮ್ಯಾಡ್ ಮ್ಯಾಕ್ಸ್ ಲುಕ್ ನಿಂದ ಪ್ರಭಾವಿತವಾಗಿದೆ ಎಂದು ಹೇಳಲಾಗಿದೆ.

Story image

ನಿರ್ಮಾಪಕರು ಚಿತ್ರದ ಕುರಿತ ಹೆಚ್ಚಿನ ವಿವರ ಬಹಿರಂಗಕ್ಕೆ ಸಿದ್ದವಾಗಿಲ್ಲವಾದರೂ ಉಪೇಂದ್ರ ಅವರ ಲುಕ್ ಚಿತ್ರದಲ್ಲಿ, ವಿಶೇಷವಾಗಿರಲಿದ್ದು ನಾಯಕನ ಪರಿಚಯದ ಸನ್ನಿವೇಶ, ಹಾಡುಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸುಳಿವು ಕೊಟ್ಟಿದ್ದಾರೆ."ಈ ವೇಷಭೂಷಣವನ್ನು ವಿನ್ಯಾಸಗೊಳಿಸಲು ಸಾಕಷ್ಟು ವಿಶೇಷ ಕೆಲಸಗಳಾಗಿತ್ತು"ಎಂದು ಉಪೇಂದ್ರನಿಗಾಗಿ ಬುದ್ಧವಂತ 2 ನಲ್ಲಿ ಉಪೇಂದ್ರ ಅವರ ಡ್ರೆಸ್ಸಿಂಗ್ ವಿನ್ಯಾಸಕಾರ ಜಯರಾಮ್ ಹೇಳಿದ್ದಾರೆ.

"ಈ ಉಡುಪನ್ನು ಮುಂಬೈನ ಜಿಮ್ಮಿ ಬಾಬು ಅವರೊಂದಿಗೆ ಸಮಾಲೋಚಿಸಿ ವಿನ್ಯಾಸಗೊಳಿಸಲಾಗಿದೆ, ಮತ್ತು ಬೂಟುಗಳು ಸೇರಿದಂತೆ ಬಟ್ಟೆ ಮತ್ತು ಪರಿಕರಗಳನ್ನು ಕಸ್ಟಮೈಸ್ ಮಾಡಲಾಗಿದೆ" ಎಂದು ಅವರು ಹೇಳುತ್ತಾರೆ. 

ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ನಟ ಡ್ಯುಯಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಉಪ್ಪಿ ಎದುರಾಗಿ ಆದಿತ್ಯ ಮೊದಲ ಬಾರಿಗೆ ಖಳನಟನ ಪಾತ್ರ ವಹಿಸಿದ್ದಾರೆ. ಬುದ್ಧಿವಂತ 2 ನಲ್ಲಿ ಮೇಘನಾ ರಾಜ್ ಮತ್ತು ಸೋನಾಲ್ ಮೋಂಟಾರಿಯೋ ಪ್ರಮುಖ ನಾಯಕಿಯರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.