ಕೊಡಗಿಗೆ ಸುಸಜ್ಜಿತ ಆಸ್ಪತ್ರೆ: ಪ್ರತಾಪ್ ಸಿಂಹ ಬಳಿ ಅಪ್ಡೇಟ್ಸ್ ಕೇಳಿದ ರಶ್ಮಿಕಾ ಮಂದಣ್ಣ!
ಕೊಡಗಿನ ಬೆಡಗಿ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಿಂದೊಮ್ಮೆ ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಅಗತ್ಯದ ಕುರಿತು ಟ್ವೀಟ್ ಮಾಡಿರುವುದು ನೆನಪಿದೆಯಷ್ಟೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಸಹ ಪ್ರತಿಕ್ರಯಿಸಿದ್ದರು. ಇದೀಗ ರಶ್ಮಿಕಾ ಮತ್ತೆ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.

ಕೊಡಗಿನ ಬೆಡಗಿ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಿಂದೊಮ್ಮೆ ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಅಗತ್ಯದ ಕುರಿತು ಟ್ವೀಟ್ ಮಾಡಿರುವುದು ನೆನಪಿದೆಯಷ್ಟೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಸಹ ಪ್ರತಿಕ್ರಯಿಸಿದ್ದರು. ಇದೀಗ ರಶ್ಮಿಕಾ ಮತ್ತೆ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.
ಈ ಬಾರಿ ನಟಿ ತಾವು ಈ ಹಿಂದೆ ಕೇಳಿದ್ದ ಕೊಡಗಿನ ಆಸ್ಪತ್ರೆ ಕುರಿತ ವಿಷಯದ ಬಗೆಗೆ ಅಪ್ಡೇಟ್ಸ್ ಏನಾದರೂ ಇದೆಯೆ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ.
"ಸಂಸದ ಪ್ರತಾಪ್ ಸಿಂಹ ಅವರೇ, ನಾನು ಈ ಟ್ವೀಟ್ ಮಾಡುತ್ತಿರುವುದು ಕೊಡಗಿಗೆ ಸುಸಜ್ಜಿತ ಆಸ್ಪತ್ರೆಯ ವಿಚಾರವಾಗಿ. ಈ ಬಗ್ಗೆ ಏನಾದರೂ ಅಪ್ಡೇಟ್ಸ್ ಸಿಗುತ್ತದೆಯೆ?ಈ ಕುರಿತ ಬೆಳವಣಿಗೆಗಳ ಸಂಬಂಧ ಏನಾದರೂ ಮಾಹಿತಿ ಲಭಿಸಿದರೆ ಸಂತೋಷವಾಗುತ್ತದೆ" ಎಂದು ರಶ್ಮಿಕಾ ತಮ್ಮ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ಟ್ಯಾಗ್ ಸಹ ಮಾಡಿದ್ದಾರೆ.

ನಟಿಯ ಈ ಟ್ವೀಟ್ ಬಗೆಗೆ ಕನ್ನಡ ಪ್ರೇಮಿಗಳು ಮಾತ್ರ ಮುನಿಸಿಕೊಂಡಿದ್ದಾರೆ. "ರಶ್ಮಿಕಾ ಅವರೇ ನಿಮಗೆ ಕನ್ನಡದಲ್ಲಿ ಮಾತನಾಡಲು ಕಷ್ಟವಾಗುತ್ತದೆ, ಆದರೆ ಕನ್ನಡದಲ್ಲಿ ಟ್ವೀಟ್ ಮಾಡಿರಿ." ಎಂದಿದ್ದಾರೆ.
ಇನ್ನೂ ಕೆಲವರು ನಟಿಯ ಸಾಮಾಜಿಕ ಕಳಕಳಿಯನ್ನು ಮೆಚ್ಚಿಕೊಂಡಿದ್ದು ಕೊಡಗಿನ ಆಸ್ಪತ್ರೆ ಕುರಿತ ಆವರ ವಿಶೇಷ ಕಾಳಜಿ ಒಳ್ಳೆಯದೆಂದು ಹೇಳೀದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


