ಯಶ್-ರಾಧಿಕಾ ಬಾಳಲ್ಲಿ ಬೆಳಗಿದ ಹಣತೆ: ಗಂಡು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್ ವುಡ್ 'ಸಿಂಡ್ರೆಲ್ಲಾ'
ದೀಪಾವಳಿ ಹಬ್ಬದ ಸಂಭ್ರಮ-ಸಡಗರದ ಮಧ್ಯೆಯೇ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ಮತ್ತೊಂದು ಖುಷಿಯ ಸಮಯ ಬಂದಿದೆ.

ಬೆಂಗಳೂರು:ದೀಪಾವಳಿ ಹಬ್ಬದ ಸಂಭ್ರಮ-ಸಡಗರದ ಮಧ್ಯೆಯೇ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ಮತ್ತೊಂದು ಖುಷಿಯ ಸಮಯ ಬಂದಿದೆ.
ನಟಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈಗಾಗಲೇ ಈ ದಂಪತಿಗೆ ಆಯ್ರಾ ಎಂಬ 10 ತಿಂಗಳ ಹೆಣ್ಣು ಮಗುವಿದೆ. ಇದೀಗ ಎರಡನೇ ಮಗುವಿನ ಆಗಮನ ಕುಟುಂಬದಲ್ಲಿ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
ಇಂದು ಬೆಳಗ್ಗೆ ರಾಧಿಕಾ ಪಂಡಿತ್ ನಗರದ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ಹೊತ್ತಿನಲ್ಲಿ ಗಂಡು ಮಗು ಜನನದ ಸುದ್ದಿ ಸಿಕ್ಕಿದ್ದು ದಂಪತಿಯ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ. ಜೂನಿಯರ್ ರಾಕಿಂಗ್ ಸ್ಟಾರ್ ಎಂದೇ ಅಭಿಮಾನಿಗಳು ಮಗುವನ್ನು ಸ್ವಾಗತಿಸುತ್ತಿದ್ದಾರೆ.
ತೆರೆ ಮೇಲೆ ಜೋಡಿಯಾಗಿ ಚಿತ್ರಪ್ರೇಮಿಗಳಿಂದು ರಾಕಿಂಗ್ ಸ್ಟಾರ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಎಂದು ಕರೆಸಿಕೊಳ್ಳುವ ಯಶ್ ಮತ್ತು ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


