ಸಿನಿಮಾ ಸುದ್ದಿ

ಹಿಂದಿ ವೆಬ್ ಸರಣಿ ಲೋಕಕ್ಕೆ ಬಸಣ್ಣಿ 'ತಾನ್ಯಾ' ಎಂಟ್ರಿ

ಚಾಲೆಂಜಿಗ್ ಸ್ಟಾರ್ ದರ್ಶನ ಅಭಿನಯದ ಯಜಮಾನ ಚಿತ್ರದಲ್ಲಿ ಬಸಣ್ಣಿ ಬಾ ಹಾಡಿನ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದ ಸ್ಯಾಂಡಲ್ ವುಟ್ ನಟಿ ತಾನ್ಯಾ ಹೋಪ್ ಇದೀಗ ವೆಬ್ ಸರಣಿ ಲೋಕಕ್ಕೆ ಕಾಲಿಡುತ್ತಿದ್ದಾರೆ.

ಹಿಂದಿ ವೆಬ್ ಸರಣಿ ಲೋಕಕ್ಕೆ ಬಸಣ್ಣಿ 'ತಾನ್ಯಾ' ಎಂಟ್ರಿ
ತಾನ್ಯಾ
Published On :

ಚಾಲೆಂಜಿಗ್ ಸ್ಟಾರ್ ದರ್ಶನ ಅಭಿನಯದ ಯಜಮಾನ ಚಿತ್ರದಲ್ಲಿ ಬಸಣ್ಣಿ ಬಾ ಹಾಡಿನ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದ ಸ್ಯಾಂಡಲ್ ವುಟ್ ನಟಿ ತಾನ್ಯಾ ಹೋಪ್ ಇದೀಗ ವೆಬ್ ಸರಣಿ ಲೋಕಕ್ಕೆ ಕಾಲಿಡುತ್ತಿದ್ದಾರೆ. 

ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ತಾನ್ಯಾ ಇದೀಗ ಹೊಸ ಪ್ರಯೋಗಕ್ಕೆ ಕೈಹಾಕುತ್ತಿದ್ದಾರೆ. 

ಯಜಮಾನ ಚಿತ್ರದಲ್ಲಿ ಬಸಣ್ಣಿ ಎಂದೇ ಖ್ಯಾತಿ ಗಳಿಸಿದ್ದ ತಾನ್ಯಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ವೆಬ್ ಲೋಕದಲ್ಲೂ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. 

ತಾನ್ಯಾ ಅವರು ನಟಿಸುತ್ತಿರುವ ವೆಬ್ ಸಿರೀಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ನೆಟ್ ಫ್ಲಿಕ್ಸ್ ನಿರ್ಮಿಸುತ್ತಿರುವ ಸರಣಿಯಲ್ಲಿ ತಾನ್ಯಾ ಮಿಂಚುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್ ತಿಂಗಳಿನಿಂದ ವೆಬ್ ಸರಣಿಯ ಚಿತ್ರೀಕರಣ ಆರಂಭಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.