'ಮಾಲ್ಗುಡಿ ಡೇಸ್'ನಲ್ಲಿ ವೃದ್ಧನಾದ ವಿಜಯ್ ರಾಘವೇಂದ್ರ
ನಟ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದ ಪೋಸ್ಟರ್ ಸದ್ದು ಮಾಡುತ್ತಿದೆ. ತಮ್ಮ ಪಾತ್ರಗಳಲ್ಲಿ ಪ್ರಯೋಗ ನಡೆಸುವ ಕಲಾವಿದ ಎಂದು ಹೆಸರಾಗಿರುವ ವಿಜಯ್ ರಾಘವೇಂದ್ರ ಇದರಲ್ಲಿ 65ರಿಂದ 70 ವರ್ಷದ ವೃದ್ಧನ ಪಾತ್ರ ನಿರ್ವಹಿಸುತ್ತಿದ್ದಾರೆ.

ನಟ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದ ಪೋಸ್ಟರ್ ಸದ್ದು ಮಾಡುತ್ತಿದೆ. ತಮ್ಮ ಪಾತ್ರಗಳಲ್ಲಿ ಪ್ರಯೋಗ ನಡೆಸುವ ಕಲಾವಿದ ಎಂದು ಹೆಸರಾಗಿರುವ ವಿಜಯ್ ರಾಘವೇಂದ್ರ ಇದರಲ್ಲಿ 65ರಿಂದ 70 ವರ್ಷದ ವೃದ್ಧನ ಪಾತ್ರ ನಿರ್ವಹಿಸುತ್ತಿದ್ದಾರೆ.
ಕಿಶೋರ್ ಮೂಡಬಿದ್ರೆ ಚಿತ್ರದ ನಿರ್ದೇಶಕರು. ನಿರ್ದೇಶನ ಕೆಲಸ ಮಾತ್ರವಲ್ಲದೆ ಚಿತ್ರಕಥೆ, ಕಥೆ, ಸಂಭಾಷಣೆಯನ್ನು ಕೂಡ ಕಿಶೋರ್ ಅವರೇ ನಿರ್ವಹಿಸಿದ್ದಾರೆ. ವಿಜಯ್ ರಾಘವೇಂದ್ರ ಅವರಿಗೆ ವಯೋವೃದ್ಧನ ಮೇಕಪ್ ಮಾಡಿದವರು ರೋಶನ್ ಜಿ, ಇವರು ಕೇರಳದವರು.
ಸಾಮಾನ್ಯವಾಗಿ ಕನ್ನಡಕ್ಕೆ ಪ್ರಾಸ್ಥೆಟಿಕ್ ಮೇಕಪ್ ತಜ್ಞರನ್ನು ಮುಂಬೈಯಿಂದ ಅಥವಾ ವಿದೇಶಗಳಿಂದ ಕರೆಸಲಾಗುತ್ತದೆ. ಆದರೆ ರೋಶನ್ ಅವರು ದಕ್ಷಿಣ ಭಾರತೀಯರಾಗಿ ಸಿಕ್ಕಿದ್ದು ನಮಗೆ ಖುಷಿಯಿದೆ ಎಂದರು ನಿರ್ದೇಶಕ ಕಿಶೋರ್.
ಬರಹಗಾರ ಲಕ್ಷ್ಮಿ ನಾರಾಯಣ ಮಾಲ್ಗುಡಿ ಎಂಬ ಹಿರಿಯ ವ್ಯಕ್ತಿಯ ಸುತ್ತ ಸುತ್ತುವ ಕಥೆ ಇದಾಗಿದೆ. ಮಾಮೂಲಿ ಕಥೆಗಿಂತ ಭಿನ್ನವಿದೆ ಎನ್ನುತ್ತಾರೆ.
ಚಿತ್ರಕ್ಕೆ ಮೇಕಪ್ ಮಾಡಿಸಿಕೊಳ್ಳಲು ವಿಜಯ್ ರಾಘವೇಂದ್ರ 4ರಿಂದ 5 ಗಂಟೆ ಕೂರಬೇಕಂತೆ. ನಂತರ ಅದನ್ನು ತೆಗೆಯಲು ಒಂದೂವರೆ ಗಂಟೆ ಬೇಕು. ಹೀಗೆ ಸುಮಾರು 30 ದಿನಗಳ ಕಾಲ ಮಾಡಿದ್ದರಂತೆ. ಕರ್ನಾಟಕ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ.
ದಿವಂಗತ ಶಂಕರ್ ನಾಗ್ ನಿರ್ಮಾಣದ ಟಿವಿ ಧಾರಾವಾಹಿ ಮಾಲ್ಗುಡಿ ಡೇಸ್ ಮತ್ತು ಈ ಚಿತ್ರದ ಶೀರ್ಷಿಕೆಗೆ ಯಾವುದೇ ಸಂಬಂಧವಿಲ್ಲವಂತೆ. ರತ್ನಾಕರ್ ಕಾಮತ್ ನಿರ್ಮಾಣದ ಚಿತ್ರದಲ್ಲಿ ಗ್ರೀಷ್ಮ ಶ್ರೀಧರ್ ನಾಯಕಿ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಧನ್ ರಾಜ್, ತುಳು ನಟ ಅರ್ಜುನ್ ಕಾಪಿಕಾಡ್ ನಟಿಸುತ್ತಿದ್ದಾರೆ. ಗಗನ್ ಬಡೆರಿಯಾ ಸಂಗೀತ, ಉದಯ್ ಲೀಲಾ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


