'ಆಸ್ಕರ್' ಪ್ರಶಸ್ತಿ ದಯಾಳ್ ಬಿಗ್ ಬಯಕೆ!
ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ’ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಕನಸೇನು ಗೊತ್ತೇ? ಆಸ್ಕರ್ ಪ್ರಶಸ್ತಿ ಪಡೆಯಬಲ್ಲ ಚಿತ್ರ ನಿರ್ಮಿಸುವುದು!

ಬೆಂಗಳೂರು: ಅವಕಾಶ ಆಕಾಶದಾಚೆಗೂ ವ್ಯಾಪಿಸಬಹುದು, ಕನಸಿನ ಹಕ್ಕಿಗೆ ರೆಕ್ಕೆ ಮೂಡಿದರೆ ಇಚ್ಛೆಯಿದ್ದೆಡಿಗೆ ಹಾರಬಹುದು ಅಲ್ಲವೇ? ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ಮಿಸಿ, ಪ್ರಸ್ತುತ ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ’ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಕನಸೇನು ಗೊತ್ತೇ? ಆಸ್ಕರ್ ಪ್ರಶಸ್ತಿ ಪಡೆಯಬಲ್ಲ ಚಿತ್ರ ನಿರ್ಮಿಸುವುದು!
ಮಹಿಳಾ ಪ್ರಧಾನ ಚಿತ್ರ ’ರಂಗನಾಯಕಿ’ ಯ ಅಧಿಕೃತ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಚಿತ್ರ ನವೆಂಬರ್ ೨೪ರಂದು ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡುವುದರ ಜತೆಗೆ, ತಮ್ಮ ಕನಸನ್ನೂ ಹಂಚಿಕೊಂಡಿದ್ದಾರೆ. ಈ ಹಿಂದೆ ಹಗ್ಗದ ಕೊನೆ, ಆಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ ಆದರೆ ಈಗ ’ರಂಗನಾಯಕಿ’ ಯ ಮೂಲಕ ಸಫಲವಾಯಿತು ಆದರೆ ಆಸ್ಕರ್ ಪ್ರಶಸ್ತಿ ಪಡೆಯುಬೇಕು ಎಂಬುದು ನನ್ನ ಬಹುದೊಡ್ಡ ಕನಸು ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


