ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಪಡೆಯುವ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ? ಕಿಚ್ಚ ಕೊಟ್ಟ ಉತ್ತರ!
ಕಿರುತೆರೆ, ಹಿರಿತೆರೆಯ ಬಗ್ಗೆ ಕನ್ನಡ ಚಿತ್ರ ರಸಿಕರಿಗೆ ಇನ್ನಿಲ್ಲದ ಆಕರ್ಷಣೆ ನಟ, ನಟಿಯರ ದಿನಚರಿ, ಊಟ, ತಿಂಡಿ, ಉಡುಪು ಸೇರಿದಂತೆ ಎಲ್ಲದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಅದರಲ್ಲೂ ಸ್ಟಾರ್ ನಟರ ಬಗ್ಗೆ ಮಾಹಿತಿ ಕಲೆಹಾಕಲು ಎಲ್ಲಿಲ್ಲದೆ ಉತ್ಸಾಹ ತೋರಿಸುತ್ತಾರೆ.

ಬೆಂಗಳೂರು: ಕಿರುತೆರೆ, ಹಿರಿತೆರೆಯ ಬಗ್ಗೆ ಕನ್ನಡ ಚಿತ್ರ ರಸಿಕರಿಗೆ ಇನ್ನಿಲ್ಲದ ಆಕರ್ಷಣೆ ನಟ, ನಟಿಯರ ದಿನಚರಿ, ಊಟ, ತಿಂಡಿ, ಉಡುಪು ಸೇರಿದಂತೆ ಎಲ್ಲದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಅದರಲ್ಲೂ ಸ್ಟಾರ್ ನಟರ ಬಗ್ಗೆ ಮಾಹಿತಿ ಕಲೆಹಾಕಲು ಎಲ್ಲಿಲ್ಲದೆ ಉತ್ಸಾಹ ತೋರಿಸುತ್ತಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ೭ನೇ ಆವೃತ್ತಿ ಶುರುವಾಗಿದೆ.
ಮೊದಲ ದಿನ ಅವರು ಯಾವ ಉಡುಪು ತೊಟ್ಟು ಬರುತ್ತಾರೆ, ಸ್ಪರ್ಧಿಗಳನ್ನು ಹೇಗೆಲ್ಲ ಬರಮಾಡಿಕೊಳ್ಳುತ್ತಾರೆ ಎಂದು ತಿಳಿದುಕೊಳ್ಳುವುದರ ಜತೆಗೆ ನಿರೂಪಣೆಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದು ವೀಕ್ಷಕರ ಮುಖ್ಯ ಪ್ರಶ್ನೆ ಈ ಕುರಿತು ಸುದೀಪ್ ಅವರನ್ನೇ ಕೇಳಿದಾಗ ಅವರು ಹೇಳಿದ್ದೇನು ಗೊತ್ತಾ? ಸಂಭಾವನೆ ಬಗ್ಗೆ ಹೇಳಬೇಕೆಂದೇನೂ ಇಲ್ಲ ಅದು ನನ್ನ ಹೆಂಡತಿ, ನನ್ನ ತಂದೆ ತಾಯಿಗಳಿಗೆ ತಿಳಿದರೆ ಸಾಕು ಒಂದು ವೇಳೆ ಹೆಚ್ಚು ಪಡೆದರೂ ಯಾರಿಗೂ ಕೊಡುವುದಿಲ್ಲ, ಕಡಿಮೆಯಾದರೂ ಯಾರೂ ನನಗೆ ಇನ್ನಷ್ಟು ನೀಡುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದರೆ.
ಇದೇ ವೇಳೆ ನಿರಂತರ ದುಡಿಯುತ್ತಿರುವ ಬಗ್ಗೆ ಪ್ರಸ್ತಾಪಿಸಿ, ವಯಸ್ಸಾಗುತ್ತಿದೆ ಮುಖದ ಮೇಲೆ ಮೂಡುವ ನೆರಿಗೆಗಳನ್ನು ತೆಗೆದುಹಾಕಲಾಗದು. ಇದರ ನಡುವೆ ಹೆಂಡತಿ, ಮಗಳು, ತಂದೆತಾಯಿಗಳಿಗೂ ಸಮಯ ನೀಡಬೇಕು. ಸದ್ಯ ತಂತ್ರಜ್ಞಾನ ಮುಂದುವರಿದಿರುವ ಕಾರಣ, ಎಲ್ಲೇ ಇದ್ದರೂ, ವಿಡಿಯೋ ಕಾಲ್ ಮೂಲಕ ಮನೆಯವರನ್ನು ತಪ್ಪದೆ ಮಾತನಾಡಿಸುತ್ತೇನೆ ಎಂದರು.
ಮೂಲಗಳ ಪ್ರಕಾರ ಸುದೀಪ್ ಅವರು ಒಂದು ಸೀಸನ್ ಗೆ ಬರೋಬ್ಬರಿ 4 ಕೋಟಿ ರುಪಾಯಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


