ಸಿನಿಮಾ ಸುದ್ದಿ

ಭರಾಟೆ ನನಗೆ ಸಂಪೂರ್ಣ ಭಿನ್ನ ಅನುಭವ ನೀಡಿದ ಚಿತ್ರ: ಶ್ರೀಲೀಲಾ 

ನಾಯಕಿ ಶ್ರೀಲೀಲಾ ಕಳೆದೊಂದು ತಿಂಗಳಿನಿಂದ ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಕಿಸ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿರುವ ಶ್ರೀಲೀಲಾ ಎರಡನೇ ಚಿತ್ರ ಭರಾಟೆಯ ಬಿಡುಗಡೆಗೆ ಇದಿರು ನೋಡುತ್ತಿದ್ದಾರೆ.

ಭರಾಟೆ ನನಗೆ ಸಂಪೂರ್ಣ ಭಿನ್ನ ಅನುಭವ ನೀಡಿದ ಚಿತ್ರ: ಶ್ರೀಲೀಲಾ 
ಶ್ರೀಲೀಲಾ
Published On :

ನಾಯಕಿ ಶ್ರೀಲೀಲಾ ಕಳೆದೊಂದು ತಿಂಗಳಿನಿಂದ ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಕಿಸ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿರುವ ಶ್ರೀಲೀಲಾ ಎರಡನೇ ಚಿತ್ರ ಭರಾಟೆಯ ಬಿಡುಗಡೆಗೆ ಇದಿರು ನೋಡುತ್ತಿದ್ದಾರೆ.


ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದ ನಾಯಕ ಶ್ರೀಮುರಳಿ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ 18ರಂದು ತೆರೆಗೆ ಬರಲಿದೆ.ಭರಾಟೆ ಎಂದರೆ ಶಬ್ದ, ಇದು ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ಮಾಡುತ್ತದೆ. ಭರಾಟೆ ಚಿತ್ರದಲ್ಲಿ ಶಬ್ದದ ಭಾವನೆಯನ್ನು ಹಲವು ಭಾವನೆಗಳ ಮೂಲಕ ತೋರಿಸಲಾಗುತ್ತದೆ. ಕಿಸ್ ಚಿತ್ರ ಮಾಡುತ್ತಿರುವ ವೇಳೆಗೆ ಭರಾಟೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. ಇದು ಮೊದಲ ಚಿತ್ರಕ್ಕಿಂತ ಸಂಪೂರ್ಣ ಭಿನ್ನ. ಭರಾಟೆ ಚಿತ್ರದಲ್ಲಿ ಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಅಲ್ಲದೆ ನನಗೆ ನಟಿಸಲು ಅವಕಾಶ ಸಿಕ್ಕಿದೆ, ಭರತನಾಟ್ಯ, ಕುದುರೆ ಸವಾರಿ, ವೀಣೆ ನುಡಿಸುವ ಅವಕಾಶ ಕೂಡ ಸಿಕ್ಕಿದೆ ಎಂದರು ಶ್ರೀಲೀಲಾ.


ಭರಾಟೆ ಚಿತ್ರೀಕರಣ ವೇಳೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತಂತೆ. ಹಾಡಿನ ಚಿತ್ರೀಕರಣ ವೇಳೆ ಬೆಟ್ಟದಿಂದ ಉರುಳುವ ದೃಶ್ಯವಿತ್ತು. ನಾನು ಭಾರೀ ಗಾತ್ರದ ಗೌನ್ ಧರಿಸಿದ್ದೆ. ಅದು ಹೆಲಿಕಾಪ್ಟರ್ ಶೂಟ್. ಶ್ರೀಮುರಳಿ ಮತ್ತು ನಾನು ಹಾಡೊಂದಕ್ಕೆ ನಟಿಸಬೇಕಾಗಿತ್ತು. ನಂತರ ನಾನು ಓಡಿ ಹೋಗಿ ಅವಿತು ಕೂರಬೇಕು. ಪರ್ವತದ ಮೇಲೆ ನಿಂತಿದ್ದೆವು. ಹಿಂದೆ ಜೋರಾಗಿ ಓಡುವಾಗ ಜಾರಿದೆ. ಪರ್ವತದ ಕೆಳಗೆ ಉರುಳುತ್ತಾ ಹೋದೆ. ಅದೃಷ್ಟವಶಾತ್ ಕಲ್ಲೊಂದು ಮಧ್ಯದಲ್ಲಿ ತಡೆದು ನನ್ನನ್ನು ಕಾಪಾಡಿತು. ಭಯವನ್ನು ನಿವಾರಿಸಲು ಮುಂದಿನ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾದೆ ಎಂದು ಹೇಳುತ್ತಾರೆ ಶ್ರೀಲೀಲಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.