ಸಿನಿಮಾ ಸುದ್ದಿ

ಯುವರತ್ನ ಟೀಸರ್ ರಿಲೀಸ್: ನಟ ಸಂಜಯ್ ದತ್ ಹೇಳಿದ್ದೇನು?

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ `ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿ ಬಾಲಿವುಡ್ ನಟ ಸಂಜಯ್ ದತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವರತ್ನ ಟೀಸರ್ ರಿಲೀಸ್: ನಟ ಸಂಜಯ್ ದತ್ ಹೇಳಿದ್ದೇನು?
ಸಂಜಯ್ ದತ್
Published On :

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ `ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನೋಡಿ ಬಾಲಿವುಡ್ ನಟ ಸಂಜಯ್ ದತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಜಯ್ ತಮ್ಮ ಟ್ವಿಟ್ಟರಿನಲ್ಲಿ ಟೀಸರ್ ಲಿಂಕ್ ಹಂಚಿಕೊಂಡು ಅದಕ್ಕೆ, “ಯುವರತ್ನ ಟೀಸರ್ ನೋಡಲು ಅದ್ಭುತವಾಗಿದೆ” ಎಂದು ಬರೆದುಕೊಂಡು ಇಡೀ ಚಿತ್ರತಂಡಕ್ಕೆ ಶುಭಶಾಯ ತಿಳಿಸಿದ್ದಾರೆ. ರಗ್ಬಿ ಆಟದ ಸುತ್ತ ಯುವರತ್ನ ಸಿನಿಮಾದ ಟೀಸರ್ ಮಾಡಲಾಗಿದೆ.

ಹೊಂಬಾಳೆ ಫಿಲಂ ಯೂಟ್ಯೂಬ್ ಚಾನಲ್‍ನಲ್ಲಿ `ಯುವರತ್ನ’ ಟೀಸರನ್ನು ರಿಲೀಸ್ ಮಾಡಿದೆ. ಟೀಸರಿನಲ್ಲಿ ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. 

ಈ ಸಿನಿಮಾವನ್ನು ಹೊಂಬಾಳೆ ಫಿಲಂನಲ್ಲಿ ನಿರ್ಮಾಣ ಮಾಡುತ್ತಿದೆ. ಇದೇ ಸಂಸ್ಥೆಯ `ಕೆಜಿಎಫ್ 2′ ಸಿನಿಮಾದ ಮೂಲಕ ಸಂಜಯ್ ದತ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ.

ಸದ್ಯ ಈ ಟೀಸರ್ ಬಿಡುಗಡೆಯಾದ ಒಂದು ದಿನದಲ್ಲೇ ಯೂಟ್ಯೂಬ್‍ನಲ್ಲಿ ನಂಬರ್ 1 ಟ್ರೆಂಡಿಂಗ್‍ನಲ್ಲಿದೆ. ಇದುವರೆಗೂ 8.9 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 81 ಸಾವಿರಕ್ಕೂ ಮಂದಿ ಲೈಕ್ಸ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.