ಇನ್ಮುಂದೆ ಹುಚ್ಚನಂತೆ ಆಡಲ್ಲ, ನಾನು ಬದಲಾಗಿದ್ದೇನೆ, ಕ್ಷಮಿಸಿಬಿಡಿ: ಹುಚ್ಚ ವೆಂಕಟ್
ಈ ಹಿಂದೆ ಹಲವು ತಪ್ಪುಗಳನ್ನು ತಿಳಿದೋ ತಿಳಿಯದೆಯೋ ಮಾಡಿದ್ದೇನೆ, ಇನ್ನು ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜತೆಯೂ ಗಲಾಟೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಕ್ಷಮಿಸಿ ಎಂದು ಚಿತ್ರನಟ ಹುಚ್ಚ ವೆಂಕಟ್ ಮನವಿ ಮಾಡಿದ್ದಾರೆ.

ಬೆಂಗಳೂರು: ಈ ಹಿಂದೆ ಹಲವು ತಪ್ಪುಗಳನ್ನು ತಿಳಿದೋ ತಿಳಿಯದೆಯೋ ಮಾಡಿದ್ದೇನೆ, ಇನ್ನು ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜತೆಯೂ ಗಲಾಟೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಕ್ಷಮಿಸಿ ಎಂದು ಚಿತ್ರನಟ ಹುಚ್ಚ ವೆಂಕಟ್ ಮನವಿ ಮಾಡಿದ್ದಾರೆ.
ಪ್ರೆಸ್‍ಕ್ಲಬ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಡೆಗಳಲ್ಲಿ ಜಗಳ ಆದ ನಂತರ ಜನ ನನ್ನ ಹತ್ತಿರ ಬರಲು ಹೆದರುತ್ತಿದ್ದಾರೆ. ಇದು ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಯಾರೊಂದಿಗೆ ಗಲಾಟೆ ಮಾಡಿಕೊಳ್ಳುವುದಿಲ್ಲ. ಶೂಟಿಂಗ್ ಗೆ ಹೋದ ವೇಳೆ ಕೆಲ ದುರ್ಘಟನೆಗಳು ನಡೆದಿದ್ದರಿಂದ ಈ ಹಿಂದೆ ಗಲಾಟೆ ಮಾಡಿದೆ. ಅಪ್ಪನ ದುಡ್ಡು ಹಾಳು ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಇನ್ನು ಮೇಲೆ ಸಂಪಾದನೆ ಮಾಡಿ ಸ್ವಾವಲಂಬಿ ಬದುಕು ಸಾಗಿಸುತ್ತೇನೆ ಎಂದರು.
ಈ ಹಿಂದೆ ನನ್ನೊಂದಿಗೆ ಸೆಲಿ ತೆಗೆದುಕೊಳ್ಳಲು ಅಭಿಮಾನಿಗಳು ಸದಾ ಹುರುಪಿನಿಂದ ಬರುತ್ತಿದ್ದರು. ಈಗವರು ಹೆದರುತ್ತಿದ್ದಾರೆ. ನನ್ನ ಬಳಿ ಬಂದರೆ ನಾನು ಹಲ್ಲೆ ಮಾಡಬಹುದು ಎನ್ನುವ ಹೆದರಿಕೆ ಇದೆ. ಹೀಗೆ ಮಾತನಾಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಈ ಹಿಂದೆ ತಪ್ಪು ಮಾಡಿದವರನ್ನು ನೋಡಿದರೆ ಕೋಪ ಬರುತ್ತಿತ್ತು. ಈಗ ಯಾರ ಮೇಲೆಯೂ ಕೋಪವಿಲ್ಲ. ಬಿಗ್‍ಬಾಸ್ ಮನೆಗೆ ಪ್ರವೇಶ ನೀಡಿದರೆ ಗೆಸ್ಟ್ ಆಗಿ ಹೋಗಿ ಬರುತ್ತೇನೆ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದರೆ, ಸ್ಪರ್ಧಿಗಳಿಗೆಲ್ಲ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದರು.
ಸಿನಿಮಾಗಳಲ್ಲಿ ಅತಿಥಿ ಪಾತ್ರ, ಯಾವುದಾದ್ರೂ ರಿಯಾಲಿಟಿ ಶೋ ಇದ್ದರೂ ಕೆಲಸ ಮಾಡುವೆ. ಹಳೆಯದನ್ನ ಮರೆತುಬಿಡಿ. ಎಲ್ಲಾ ಆಕಸ್ಮಿಕ, ನಾನೀಗ ಬದಲಾಗಿದ್ದೇನೆ. ಸಿನಿಮಾ ಮಾಡೋಕೆ ಅಪ್ಪ ದುಡ್ಡು ಕೊಡ್ತೇನೆ ಅಂದಿದ್ದರು. ಹಾಗಾಗಿ ನನ್ನ ಕಾರ್ ಗ್ಲಾಸ್ ಒಡೆದೆ. ಸಮಾಜದ, ಜನರ ಪ್ರೀತಿಗಾಗಿ ನಾನು ಕೆಲಸ ಮಾಡುತ್ತಾ ಬಂದಿದ್ದೇನೆ.ನಿಂತು ಹೋಗಿರುವ ಸಿನಿಮಾಗಳನ್ನು ಪೂರ್ತಿಗೊಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


