'ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ರಿಲೀಸ್: ಭಾವುಕರಾಗಿ ಕಣ್ಣೀರಿಟ್ಟ ರಕ್ಷಿತ್
ಸ್ಯಾಂಡಲ್‌ವುಡ್ 'ಕಿರಿಕ್ ಪಾರ್ಟಿ’ ಹೀರೋ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ.

ಬೆಂಗಳೂರು: ಸ್ಯಾಂಡಲ್‌ವುಡ್ 'ಕಿರಿಕ್ ಪಾರ್ಟಿ’ ಹೀರೋ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ.
ನಗರದ ಸಂಕೇತ್ ಶಂಕರ್‌ನಾಗ್ ಸ್ಟುಡಿಯೋದಲ್ಲಿ ಭರ್ಜರಿಯಾಗಿ ರಿಲೀಸ್ ಅಗಿರುವ ಶ್ರೀಮನ್ನಾರಾಯಣ ಟ್ರೇಲರ್ ಮನರಂಜನೆಯ ಫುಲ್‌ಮೀಲ್ಸನ್ನು ಬಾಳೆ ಎಲೆಯಲ್ಲಿ ಬಡಿಸುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.
'ಕಿರಿಕ್ ಪಾರ್ಟಿ’ ನಂತರ ೩ ವರ್ಷಗಳನ್ನು ಈ ಚಿತ್ರಕ್ಕಾಗಿಯೇ ಮೀಸಲಿಟ್ಟಿದ್ದೆ. ಕಳೆದ ಒಂದು ವರ್ಷದಿಂದ ಟ್ರೇಲರ್ ಬಿಡುಗಡೆಗಾಗಿ ನಾನೂ ಕೂಡ ಕಾಯುತ್ತಿದ್ದೆ’ ಎಂದ ರಕ್ಷಿತ್ ಶೆಟ್ಟಿ ಒಂದು ಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.
"ನಾನು ಮೊದಲ ಶಾರ್ಟ್ ಮೂವಿ ಮಾಡುವಾಗ ಬಜೆಟ್ ಇರಲಿಲ್ಲ. ಎರಡನೇ ಶಾರ್ಟ್ ಮೂವಿಯನ್ನ ಕೇವಲ ಐದು ಸಾವಿರದಲ್ಲಿ ಮಾಡಿದೆ. ಶಾರ್ಟ್ ಮೂವಿ ಮಾಡುವಾಗ ಜೊತೆಯಾದ ಸ್ನೇಹಿತರು ಈಗಲೂ ನನ್ನ ಜೊತೆ ಇದ್ದಾರೆ. ಅವರೆಲ್ಲರ ಪರಿಶ್ರಮ ಪ್ರೋತ್ಸಾಹದಿಂದಾಗಿ ಇಂದು ಈ ಜಾಗದಲ್ಲಿ ನಿಲ್ಲಲು ಸಾಧ್ಯವಾಗಿದೆ" ಎಂದರು.
ಮಾತನಾಡುವಾಗ ಭಾವುಕರಾದ ರಕ್ಷಿತ್ ಶೆಟ್ಟಿ, ಕೆಲವು ಕ್ಷಣ ಮಾತು ಮರೆತು ಹೋಗಿ ಭಾವುಕರಾಗಿ ಅವರ ಕಣ್ಣಂಚು ಒದ್ದೆಯಾಯಿತು.
'ಅವನೇ ಶ್ರೀಮನ್ನಾರಾಯಣ’ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಹೊರಬರಲಿದ್ದು, ೩೦ ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.
ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ೮೦ರ ದಶಕದ ಬ್ಯಾಕ್ ಡ್ರಾಪ್‌ನಲ್ಲಿ ಮೂಡಿಬಂದಿದೆ. ಸಚಿನ್ ರವಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಕ್ಷಿತ್ ಜೋಡಿಯಾಗಿ ಶಾನ್ವಿ ಶ್ರೀವಾತ್ಸವ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


