ಪವರ್ ಸ್ಟಾರ್ ಪುನೀತ್ ಗೆ ಆಕ್ಷನ್ ಕಟ್ ಹೇಳಲಿರುವ 'ರಾಮ ರಾಮ ರೆ' ನಿರ್ದೇಶಕ?
"ರಾಮ ರಾಮ ರೇ" ಹಾಗೂ "ಒಂದಲ್ಲ ಎರಡಲ್ಲ" ಖ್ಯಾತಿಯ ನಿರ್ದೇಶಕರಾದ ಡಿ ಸತ್ಯ ಪ್ರಕಾಶ್ ಈಗ ವಿಶೇಷ ಸ್ಕ್ರಿಪ್ಟ್ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಸತ್ಯ ಪ್ರಕಾಶ್ ಅವರ ಮುಂಬರುವ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಲುತ್ತಿರುವುದು....

"ರಾಮ ರಾಮ ರೇ" ಹಾಗೂ "ಒಂದಲ್ಲ ಎರಡಲ್ಲ" ಖ್ಯಾತಿಯ ನಿರ್ದೇಶಕರಾದ ಡಿ ಸತ್ಯ ಪ್ರಕಾಶ್ ಈಗ ವಿಶೇಷ ಸ್ಕ್ರಿಪ್ಟ್ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಸತ್ಯ ಪ್ರಕಾಶ್ ಅವರ ಮುಂಬರುವ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಲುತ್ತಿರುವುದು ಮಾತ್ರವಲ್ಲ ಪುನೀತ್ ಅವರ ಹೋಂ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ ಎನ್ನಲಾಗಿದೆ..
ಹೇಮಂತ್ ಎಂ ರಾವ್ ನಿರ್ದೇಶನದ ಕವಾಲುದಾರಿ, ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಚೊಚ್ಚಲ ಚಿತ್ರ, ಮಾಯಾಬಜಾರ್, ರಾಗಿಣಿ ಚಂದ್ರನ್ ಅಭಿನಯದ ಲಾ ಸಮರ್ತ್ ನಿರ್ದೇಶನದ ಚಿತ್ರಗಳು ಇದಾಗಲೇ ಪಿಆರ್ಕೆ ಬ್ಯಾನರ್ ನಿರ್ಮಿಸಿದೆ.ಸತ್ಯ ಪ್ರಕಾಶ್ ಅವರೊಂದಿಗಿನ ಚಿತ್ರವೀಗ ಪುನೀತ್ ಬ್ಯಾನರ್ ನಡಿ ನಿರ್ಮಾಣವಾಗಿ ಆರಲ್ಲಿ ಅವರೇ ನಾಯಕರಾಗಿ ನಟಿಸಿದ್ದರೆ ಅದೊಂದು ಹೊಸ ಮೈಲಿಗಲ್ಲಾಗುವುದು ಖಚಿತವೆಂದು ಮೂಲಗಳು ಹೇಳಿದೆ.. ಪವರ್ ಸ್ಟಾರ್‌ಗಾಗಿ ಸತ್ಯ ಪ್ರಕಾಶ್ ಯಾವ ರೀತಿಯ ಸ್ಕ್ರಿಪ್ಟ್ ತಯಾರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಇದಕ್ಕಾಗಿ ನಿರ್ಮಾಪಕರ ತಂಡದಿಂದ ಅಂತಿಮ ಘೋಷಣೆಯಾಗಬೇಕಿದೆ.
ನಟಸಾರ್ವಭೌಮ ಚಿತ್ರದ ನಾಯಕನಾಗಿದ್ದ ಪುನೀತ್ ಪ್ರಸ್ತುತ ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರದ ಮಾತಿನ ಭಾಗಗಳು ಕಡೆ ಹಂತದಲ್ಲಿದೆ.ಹಾಡುಗಳ ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
. ಸತ್ಯ ಪ್ರಕಾಶ್ ಅವರೊಂದಿಗಿನ ಚಿತ್ರವು 2020 ರಲ್ಲಿ ಅವರು ಪ್ರಾರಂಭಿಸಲಿರುವ ಯೋಜನೆಗಳಲ್ಲಿ ಒಂದಾಗಲಿದೆ. ಜೇಮ್ಸ್ ಚಿತ್ರಕ್ಕಾಗಿ ನಿರ್ದೇಶಕ ಚೇತನ್ ಕುಮಾರ್ ಅವರೊಂದಿಗೆ ಕೈಜೋಡಿಸಿರುವ ಪುನೀತ್ ಈ ಎರಡು ಚಿತ್ರಗಳ ನಡುವೆ ತಮ್ಮ ಸಮಯವನ್ನು ಸರಿದೂಗಿಸಲು ಯೋಜಿಸಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


