ಸಿನಿಮಾ ಸುದ್ದಿ

ಅಯೋಗ್ಯ ಸಿನಿಮಾ ಸಹನಟಿ ವಿರುದ್ದ ದೂರು ದಾಖಲು: ಸುಫಾರಿ ಕೊಟ್ಟು ಎಸ್ಕೇಪ್!

ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.

ಅಯೋಗ್ಯ ಸಿನಿಮಾ ಸಹನಟಿ ವಿರುದ್ದ ದೂರು ದಾಖಲು: ಸುಫಾರಿ ಕೊಟ್ಟು ಎಸ್ಕೇಪ್!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.

ದೃಶ್ಯ ಎಂಬ ನಟಿ ಈ ಕೃತ್ಯಕ್ಕೆ ಮುಂದಾಗಿದ್ದು, ಈಕೆ ಅಯೋಗ್ಯ ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದಳು. ರಾಜೇಶ್ ಎಂಬುವವರ ಜೀವಹರಣಕ್ಕೆ ಯತ್ನಿಸಿದ್ದು, ರಾಜೇಶ್ ದೃಶ್ಯಳಿಗೆ ಹಣ ನೀಡಿದ್ದನಂತೆ. ಆ ಹಣವನ್ನು ವಾಪಸ್ ಕೇಳಲು ಆಕೆಯ ಮನೆ ಬಳಿ ಹೋದಾಗ ದೃಶ್ಯ ಹುಡುಗರನ್ನು ಬಿಟ್ಟು ರಾಜೇಶ್ ಜೀವಹರಣಕ್ಕೆ ಯತ್ನಿಸಿದ್ದಾಳೆಂದು ಆರೋಪಿಸಲಾಗಿದೆ.

ಬಲಮುರಿ ಸಮೀಪ ರಾಜೇಶ್‌ ಮೇಲೆ ನಾಲ್ವರಿಂದ ಹಲ್ಲೆಯಾಗಿತ್ತು. ಈ ವೇಳೆ ರಾಜೇಶ್​ ದೇಹವನ್ನು ರೇಜರ್​ನಿಂದ ಕೊರೆದು ಹಾಕಲಾಗಿತ್ತು. ಈ ವೇಳೆ 'ದೃಶ್ಯ ಬಳಿ ಹಣ ಕೇಳ್ತೀಯಾ' ಎಂದು ಹಲ್ಲೆ ನಡೆಸುವವರು ಕೂಗಾಡಿರುವುದಾಗಿ ರಾಜೇಶ್​ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ರಾಜೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. 

ಪ್ರಕರಣಕ್ಕೆ ಸಂಬಂಧಿಸಿ ನಟಿ ದೃಶ್ಯ ವಿರುದ್ಧ ಮೈಸೂರಿನ ಕೆಆರ್​ಎಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.  ದೂರು ದಾಖಲಾಗುತ್ತಿದ್ದಂತೆ ದೃಶ್ಯ ಮತ್ತು ಆಕೆಯ ತಂದೆ ಎಸ್ಕೇಪ್ ಆಗಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.