ಬಂಡೀಪುರ ಅರಣ್ಯ ಸಿಬ್ಬಂದಿ, ಮಾವುತರೊಂದಿಗೆ ಇಡೀ ದಿನ ಕಳೆದ ರೋರಿಂಗ್ ಸ್ಟಾರ್
ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿರುವ ಶ್ರೀಮುರಳಿ, ಅಲ್ಲಿರುವ ಕಾಡು ಜನ ಹಾಗೂ ಅರಣ್ಯ ಸಿಬ್ಬಂದಿ ಅವರೊಂದಿಗೆ ಗುಡಿಸಲಿಗೆ ಭೇಟಿ ನೀಡಿ ಅಲ್ಲಿನ ಜನರ ಜೊತೆ ಕಾಲ ಕಳೆದಿದ್ದಾರೆ.

ಬೆಂಗಳೂರು: ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿರುವ ಶ್ರೀಮುರಳಿ, ಅಲ್ಲಿರುವ ಕಾಡು ಜನ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕೆಲ ಸಮಯ ಕಳೆದರು.
ಕರ್ನಾಟಕ ಸರ್ಕಾರದ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಸೆಪ್ಟೆಂಬರ್ ನಲ್ಲಿ ಆಯ್ಕೆಯಾದ ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಸಿನಿಮಾ ಪ್ರಚಾರ, ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಬಂದು ಅಲ್ಲಿನ ಸಿಬ್ಬಂದಿ ಮತ್ತು ವನವಾಸಿಗಳೊಂದಿಗೆ ಕಳೆದು ಖುಷಿಪಟ್ಟರು.

ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳ ಜೊತೆ ಸುತ್ತಾಡಿ ಪ್ರಕೃತಿ ಸೌಂದರ್ಯ, ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ಮಾತುಕತೆಯಾಡುತ್ತಾ ಸುತ್ತಾಡಿದರು. ಅಲ್ಲಿನ ಸಿಬ್ಬಂದಿ ಮತ್ತು ಕಾಡುಜನರ ಗುಡಿಸಲುಗಳಿಗೆ ಭೇಟಿ ನೀಡಿದರು. ಅಲ್ಲಿದ್ದ ಮಕ್ಕಳಿಗೆ ಕೆಲವೊಂದು ಉಡುಗೊರೆಗಳನ್ನು ನೀಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನೌಕರರು .ಮಾವುತರು ಹಾಗೂ ಕಾಡಿನ ಜನರೊಂದಿಗೆ ರೋರಿಂಗ್ ಸ್ಟಾರ್ ಮುರುಳಿ
ವರದಿ: ಗೂಳಿಪುರ ನಂದೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


