ಸಿನಿಮಾ ಸುದ್ದಿ

ದಕ್ಷಿಣ ಭಾರತೀಯಳಂತೆ ಕಾಣುತ್ತಿದ್ದರಿಂದ ತಿರಸ್ಕಾರ- ಮಾಡೆಲ್ ವರ್ಷಿತಾ ತಾತವರ್ತಿ

ನೋಡಲು ದಕ್ಷಿಣ ಭಾರತದವರಂತೆ ಕಾಣುತ್ತಿದ್ದರಿಂದ ತಿರಸ್ಕಾರಕ್ಕೆ ಒಳಪಟ್ಟಿದ್ದಾಗಿ ಮಾಡೆಲ್ ವರ್ಷಿತಾ ತಾತವರ್ತಿ ಹೇಳಿಕೊಂಡಿದ್ದಾರೆ.

ದಕ್ಷಿಣ ಭಾರತೀಯಳಂತೆ ಕಾಣುತ್ತಿದ್ದರಿಂದ ತಿರಸ್ಕಾರ- ಮಾಡೆಲ್ ವರ್ಷಿತಾ ತಾತವರ್ತಿ
ವರ್ಷಿತಾ ತಾತವರ್ತಿ
Published On :

ಬೆಂಗಳೂರು:ನೋಡಲು ದಕ್ಷಿಣ ಭಾರತದವರಂತೆ ಕಾಣುತ್ತಿದ್ದರಿಂದ ತಿರಸ್ಕಾರಕ್ಕೆ ಒಳಪಟ್ಟಿದ್ದಾಗಿ  ಮಾಡೆಲ್ ವರ್ಷಿತಾ ತಾತವರ್ತಿ ಹೇಳಿಕೊಂಡಿದ್ದಾರೆ.

ಸ್ವಲ್ಪ ತೂಕ ಹೆಚ್ಚಾಗಿದ್ದರಿಂದ ಮಾಡೆಲಿಂಗ್ ಗೆ ಪಿಟ್ ಆಗಲ್ಲ ಅಂತಾ ಅನೇಕ ಬಾರಿ ತಾನೇ  ಹೇಳಿಕೊಳ್ಳುತ್ತಿದ್ದಾಗಿ ಹೇಳುವ ತಾತವರ್ತಿಗೆ ಇಂತಹ ಅಡೆತಡೆಗಳು ಉತ್ಸಾಹವನ್ನು ಕುಂದಿಸಲಿಲ್ಲವಂತೆ. ಹೈದ್ರಾಬಾದ್ ಗೆ ತೆರಳಿ ಸಿನಿಮಾದಲ್ಲಿ ನಟಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.

ದಕ್ಷಿಣ ಭಾರತೀಯಳಂತೆ ಕಾಣುತ್ತಿದ್ದರಿಂದ ಯಾವುದೇ ನಿರ್ದೇಶಕರು ಸಿನಿಮಾದಲ್ಲಿ   ಅಭಿನಯಿಸಲು ಅವಕಾಶ ನೀಡಿರಲಿಲ್ಲ.
ವಿಶಾಖಪಟ್ಟಣಂನಲ್ಲಿ ಹುಟ್ಟಿ ದೆಹಲಿಯಲ್ಲಿ ಬೆಳೆದ ತನ್ನಗೆ ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸುವ ಆಸೆಯಿಂದಾಗಿ ಚೆನ್ನೈಗೆ ಹೋದೆ, ಆದರೆ, ಅಲ್ಲೂ ಕೂಡಾ ನಿರಾಸೆಯಾಯಿತು ಎಂದಿದ್ದಾರೆ.


ವಿನ್ಯಾಸಕ ಸಭ್ಯಸಾಚಿ ಉದ್ಘಾಟಿಸುತ್ತಿದ್ದ ಅಭರಣ ಮಳಿಗೆಯೊಂದಕ್ಕೆ ಸ್ನೇಹಿತೆಯೊಬ್ಬರು ನನ್ನನ್ನು ಆಹ್ವಾನಿಸಿದಾಗ ಬದುಕು ತಿರುವು ಪಡೆಯಿತು. ಕೆಲ ಅಭರಣಗಳನ್ನು ಪರಿಶೀಲಿಸುತ್ತಿದ್ದಾಗ ಅಲ್ಲಿಯೇ ಇದ್ದ ಸಭ್ಯಸಾಚಿ ಪರಿಚಯವಾಗಿ ಪೋಟೋವೊಂದನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ನಂತರ ಎರಡು ತಿಂಗಳ ಬಳಿಕ ಅವರ ತಂಡದ ಸದಸ್ಯರು ತಮ್ಮನ್ನು ಸಂಪರ್ಕಿಸಿ ಚಿತ್ರೀಕರಣಕ್ಕೆ ಕರೆದರು.ಅಲ್ಲಿಂದ ತಮ್ಮ ಜೀವನ ಬದಲಾಗಿದ್ದು, ಈಗ ವಿಶ್ವದಾದ್ಯಂತ ಇರುವ ಮಹಿಳೆಯರು ಸಂದೇಶ ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ.

ವರ್ಷಿತಾ ,ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟವನ್ನು ಪರೀಕ್ಷಿಸಲು ಪ್ರಯತ್ನಿಸಿದ್ದಾರೆ. ಒಳ್ಳೇಯ ಅವಕಾಶ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.