ಸಿನಿಮಾ ಸುದ್ದಿ

'ವೀಕೆಂಡ್' ಎಂಜಾಯ್ ಮಾಡುವ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ವೀಕೆಂಡ್ ಎಂಜಾಯ್ ಮಾಡುವಂತಹ ಸಿನಿಮಾಗಳು ಅಪರೂಪ. ಆದರೆ ಈ ವಾರ ಅದಕ್ಕೆ ಕೊರತೆ ಇರುವುದಿಲ್ಲ ಎನಿಸುತ್ತೆ. ಕಾರಣ ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಸಿನಿಮಾ ಬಿಡುಗಡೆಯಾಗುತ್ತಿದೆ.

'ವೀಕೆಂಡ್' ಎಂಜಾಯ್ ಮಾಡುವ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
'ವೀಕೆಂಡ್ಎಂ' ಜಾಯ್ ಮಾಡವ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
Published On :
ವೀಕೆಂಡ್ ಎಂಜಾಯ್ ಮಾಡುವಂತಹ ಸಿನಿಮಾಗಳು ಅಪರೂಪ. ಆದರೆ ಈ ವಾರ ಅದಕ್ಕೆ ಕೊರತೆ  ಇರುವುದಿಲ್ಲ ಎನಿಸುತ್ತೆ. ಕಾರಣ ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಸಿನಿಮಾ ಬಿಡುಗಡೆಯಾಗುತ್ತಿದೆ. 
ಅನಂತ್ ನಾಗ್ ಅವರನ್ನು ಪ್ರಮುಖ ಪಾತ್ರದಲ್ಲಿ ತೋರಿಸಿರುವ ವೀಕೆಂಡ್ ಸಿನಿಮಾ ಮೇ.24 ರಂದು ತೆರೆ ಕಂಡಿದ್ದು, ನಿರ್ದೇಶಕ ವೀಕ್ಷಕರ ತೀರ್ಪಿಗೆ ಕಾದಿದ್ದಾರೆ. 
ನಾಯಕ ನಟ ಮಿಲಿಂದ್, ನಟಿ ಸಂಜನ ಬುರ್ಲಿ ಸೇರಿದಂತೆ ಬಹುತೇಕ ಹೊಸ ಮುಖಗಳು ಈ ಸಿನಿಮಾದಲ್ಲಿದ್ದು, ಅನಂತ್ ನಾಗ್ ನನ್ನ ಟ್ರಂಪ್ ಕಾರ್ಡ್ ಎಂದಿದ್ದಾರೆ ನಿರ್ದೇಶಕ ಶೃಂಗೇರಿ ಸುರೇಶ್. 
ಅನಂತ್ ನಾಗ್ ಒಪ್ಪದೇ ಇದ್ದಿದ್ದರೆ ಈ ಸಿನಿಮಾವನ್ನು ಮಾಡುತ್ತಲೇ ಇರಲಿಲ್ಲ, ಈ ಸಿನಿಮಾ ಆಗಿದ್ದು ಅನಂತ್ ನಾಗ್ ಅವರಿಂದಲೇ ಎಂದು ಹಿರಿಯ ನಾಯಕನಿಗೆ ಕ್ರೆಡಿಟ್ ನೀಡಿರುವ ಸುರೇಶ್ 100 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.