ಸಿನಿಮಾ ಸುದ್ದಿ

ಅಭಿಷೇಕ್ ಗೌಡ ನಟನೆಯ ಅಮರ್ ಸಿನಿಮಾದಲ್ಲಿ ಕೊಡವರಿಗಾಗಿ ವಿಶೇಷ ಹಾಡು!

ದಿವಂಗತ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟಿಸಿರುವ ಅಮರ್ ಸಿನಿಮಾ ಹಾಡುಗಳು ಈಗಾಗಲೇ ಭಾರೀ ಕುತೂಹಲ ಸೃಷ್ಟಿಸಿವೆ, ಮರೆತು ಹೋಯಿತೆ, ಹೀಗೆ ಮತ್ತು ...

ಅಭಿಷೇಕ್ ಗೌಡ ನಟನೆಯ ಅಮರ್ ಸಿನಿಮಾದಲ್ಲಿ ಕೊಡವರಿಗಾಗಿ ವಿಶೇಷ ಹಾಡು!
ಅಮರ್ ಸಿನಿಮಾ ಸ್ಟಿಲ್
Published On :
ದಿವಂಗತ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟಿಸಿರುವ ಅಮರ್ ಸಿನಿಮಾ ಹಾಡುಗಳು ಈಗಾಗಲೇ ಭಾರೀ ಕುತೂಹಲ ಸೃಷ್ಟಿಸಿವೆ, ಮರೆತು ಹೋಯಿತೆ, ಹೀಗೆ ಮತ್ತು ಒಂದೇ ಏಟಿಗೆ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ,
ಇನ್ನೂ ಅಮರ್ ಸಿನಿಮಾದ ನಾಲ್ಕನೇ ಹಾಡು ಭಾರಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ವಿಶೇಷ ಸಾಂಗ್ ಕೊಡವ ಭಾಷೆಯಲ್ಲಿದೆ, ಜೋರು ಪಟ್ಟು ಆಟ ಆಡಾಣ, ಪೆಗ್ಗಾರು ಮೇಲೆ ಪೆಗ್ಗು ಹಾಕೋಣ ಎಂಬ ಸಾಹಿತ್ಯವಿದೆ,  ಜೆಸ್ಸಿ ಗಿಫ್ಟ್ ಹಿನ್ನೆಲೆ ಗಾಯನವಿದ್ದು, ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ, ಅರ್ಜುನ್ ಜನ್ಯ ಸಂಗೀತವಿದೆ, ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿದೆ,
ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಅಭಿಷೇಕ್, ತಾನ್ಯ ಹೋಪ್, ರಚಿತಾ ರಾಮ್, ನಿರೂಪ್ ಭಂಡಾರಿ, ಸೇರಿದಂತೆಹಲವರು ಪ್ರಮುಖ ಭೂಮಿಕೆಯಲ್ಲಿದ್ದಾರೆ. 
ಸಂದೇಶ್ ನಾಗರಾಜ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ತಾನ್ಯ ಹೂಪ್ ಸಿನಿಮಾದ ನಾಯಕಿಯಾಗಿದ್ದಾರೆ. ಚಿತ್ರ ಬೈಕ್ ರೇಸ್ ಜೊತೆಗೆ ನಡೆಯುವ ಲವ್ ಸ್ಟೋರಿ ಚಿತ್ರದಲ್ಲಿದೆ.
ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದರು, ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.