ಸಿನಿಮಾ ಸುದ್ದಿ

ಅಜಯ್ ರಾವ್ ಮುಂದಿನ ಸಿನಿಮಾಗೆ ಸಂಜನಾ ಆನಂದ್ ನಾಯಕಿ!

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಚೆಲುವೆ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ...

ಅಜಯ್ ರಾವ್ ಮುಂದಿನ ಸಿನಿಮಾಗೆ ಸಂಜನಾ ಆನಂದ್ ನಾಯಕಿ!
ಸಂಜನಾ ಆನಂದ್
Published On :
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಚೆಲುವೆ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯ ಏಳನೇ ಚಿತ್ರ ಇದಾಗಿದ್ದು, ಕೃಷ್ಣ ಲೀಲಾ ಖ್ಯಾತಿಯ ಅಜಯ್ ರಾವ್ ನಾಯಕನಾಗಿದ್ದಾರೆ.
ಇದು ಅಜಯ್ ರವರದ್ದು 27 ನೇ ಸಿನಿಮಾ. ಗ್ರಾಮೀಣ ಸೊಗಡಿನ ಕಥೆಗೆ ಸೂಕ್ತವಾದ ನಾಯಕಿಗಾಗಿ ಹುಡುಕಾಟ ನಡೆಸಿದ ಚಿತ್ರತಂಡಕ್ಕೆ ಸಂಜಾನ ಆನಂದ್ ಸೇರ್ಪಡೆಯಾಗಿದ್ದಾರೆ.
ಮಂಡ್ಯ ,ಚೆನ್ನಪಟ್ಟಣ್ಣ , ಹಾಗೂ ಮದ್ದೂರಿನಲ್ಲಿ ಚಿತ್ರೀಕರಣ ಮಾಡಲು ತಂಡ ಸಿದ್ಧತೆ ನಡೆಸುತ್ತಿದೆ. ಪಡಿಸುತ್ತಿದೆ. ಶ್ರೀಧರ್. ವಿ. ಸಂಭ್ರಮ್ ರವರ ಸುಮಧುರ ಸಂಗೀತವಿದ್ದು , ಶಿವು ಸೀನು ಛಾಯಾಗ್ರಹಣವಿದೆ.ಈ ಚಿತ್ರಕ್ಕೆ ಕೆ‌.ಎಂ‌. ಪ್ರಕಾಶ್ ಸಂಕಲನವಿದು , ಅಷ್ಟೇ ಉತ್ತಮವಾದ ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆಯುತ್ತಿದ್ದಾರೆ.
ಮುಂದಿನ ತಿಂಗಳ ಮೊದಲ ವಾರದಿಂದ ಶೂಟಿಂಗಿಗೆ ಹೊರಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.