ಬಾಕ್ಸಿಂಗ್ ರಿಂಗ್‌ನಲ್ಲಿ ಎದುರಾಳಿಗೆ ವಿನಯ್ ರಾಜಕುಮಾರ್ ಟಕ್ಕರ್!
ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖುಷಿಯಲ್ಲಿರುವ ವಿನಯ್ ರಾಜಕುಮಾರ್ ಅವರಿಗೆ ಅದಾಗಲೇ ಉಡುಗೊರೆ ಸಿಕ್ಕಿದೆ. ಹೌದು ವಿನಯ್ ಕುಮಾರ್ ತಮ್ಮ ಐದನೇ ಚಿತ್ರಕ್ಕೆ ಸಹಿಹಾಕಿದ್ದಾರೆ.

Published On :
ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖುಷಿಯಲ್ಲಿರುವ ವಿನಯ್ ರಾಜಕುಮಾರ್ ಅವರಿಗೆ ಅದಾಗಲೇ ಉಡುಗೊರೆ ಸಿಕ್ಕಿದೆ. ಹೌದು ವಿನಯ್ ಕುಮಾರ್ ತಮ್ಮ ಐದನೇ ಚಿತ್ರಕ್ಕೆ ಸಹಿಹಾಕಿದ್ದಾರೆ.
ವಿನಯ್ ತಮ್ಮ ಮುಂದಿನ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಕರ್ಮ ಚಾವ್ಲಾ ಚೊಚ್ಚಲ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ. ಕರ್ಮ ಚಾವ್ಲಾ ಅವರು ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು.
ಈ ಚಿತ್ರಕ್ಕೆ ಕರ್ಮ ಚಾವ್ಲಾ ಅವರೇ ಕಥೆ, ಚಿತ್ರಕಥೆ ಬರೆಯುತ್ತಿದ್ದಾರೆ. ಈ ಚಿತ್ರಕ್ಕಾಗಿ ವಿನಯ್ ತಮ್ಮ ಲುಕ್ ಅನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇನ್ನು ಜೂನ್ ನಲ್ಲಿ ಚಿತ್ರೀಕರಣಕ್ಕೆ ಚಿತ್ರ ತಂಡ ಪ್ಲಾನ್ ಮಾಡುತ್ತಿದೆ. ವಿನಯ್ ಗೆ ಕೋಚ್ ಆಗಿ ಗೋಪಾಲ್ ದೇಶಪಾಂಡೆ ಅಭಿನಯಿಸುತ್ತಿದ್ದಾರೆ.
ಇದು ನನ್ನ ಕನಸಿನ ಯೋಜನೆ. ಇದೇ ಮೊದಲ ಬಾರಿಗೆ ನಾನು ಪುಷ್ಕರ್ ಹಾಗೂ ಕರ್ಮ ಚಾವ್ಲಾ ಜೊತೆ ಕೆಲಸ ಮಾಡುತ್ತಿದ್ದೇನೆ. ನನ್ನ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರದಲ್ಲಿ ಹೆಚ್ಚು ಹಾರ್ಡ್ ವರ್ಕ್ ಮಾಡಬೇಕಿದೆ. ಈ ಚಿತ್ರ ಕ್ರೀಡೆ ಕುರಿತ ಚಿತ್ರಕಥೆಯನ್ನು ಹೊಂದಿದೆ ಎಂದು ವಿನಯ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


