ಸಿನಿಮಾ ಸುದ್ದಿ

ಹಾಗೆ ಸುಮ್ಮನೆ ಕಾಲ್ ಕೆಜಿ ಪ್ರೀತಿ: ಕಿರಣ್ ಜತೆ ಹಿತಾ ಚಂದ್ರಶೇಖರ್ ನಿಶ್ಚಿತಾರ್ಥ

ಖ್ಯಾತ ನಟ ಸಿಹಿಕಹಿ ಚಂದ್ರು ಹಾಗೂ ಗೀತಾ ಅವರ ಪುತ್ರಿ ಹಿತಾ ಚಂದ್ರಶೇಖರ್ ಇಂದು (ಮೇ 1) ತಮ್ಮ ಗೆಳೆಯ, "ಹಾಗೆ ಸುಮ್ಮನೆ" ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹಾಗೆ ಸುಮ್ಮನೆ ಕಾಲ್ ಕೆಜಿ ಪ್ರೀತಿ: ಕಿರಣ್ ಜತೆ ಹಿತಾ ಚಂದ್ರಶೇಖರ್ ನಿಶ್ಚಿತಾರ್ಥ
ಕಿರಣ್ ಜತೆ ಹಿತಾ ಚಂದ್ರಶೇಖರ್ ನಿಶ್ಚಿತಾರ್ಥ
Published On :
ಬೆಂಗಳೂರು: ಖ್ಯಾತ ನಟ ಸಿಹಿಕಹಿ ಚಂದ್ರು ಹಾಗೂ ಗೀತಾ ಅವರ ಪುತ್ರಿ ಹಿತಾ ಚಂದ್ರಶೇಖರ್ ಇಂದು (ಮೇ 1) ತಮ್ಮ ಗೆಳೆಯ, "ಹಾಗೆ ಸುಮ್ಮನೆ" ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹಲವು ದಿನಗಳ ಹಿಂದೆಯೇ ಈ ಜೋಡಿ ಹಸೆಮಣೆ ಏರುವ ಸುದ್ದಿ ಮಾದ್ಯಮಗಳಲ್ಲಿ ಬಂದಿದ್ದು ಇಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ನಟ ಕಿರಣ್ ಹಾಗೂ ಹಿತಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಇಷ್ಟಪಟ್ಟಿದ್ದರು. ಕಿರಣ್ 2008ರಲ್ಲಿ "ಹಾಗೆ ಸುಮ್ಮನೆ" ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸ್ದ್ದು ಹಲವು ಸಿನಿಮಾ, ಕಿರುತೆರೆ ಧಾರಆವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಇನ್ನು ಹಿತಾ ಚಂದ್ರಶೇಖರ್ ಸಹ ಬಹಳಷ್ಟು ಚಿತ್ರಗಲಲ್ಲಿ ಕಾಣಿಸಿಕೊಂಡಿದ್ದು ಇತ್ತೀಚೆಗೆ ಬಿಡುಗಡೆಯಾದ ಜಗ್ಗೇಶ್ ಅಭಿನಯದ "ಪ್ರೀಮಿಯರ್ ಪದ್ಮಿನಿ"ಯಲ್ಲಿ ಸಹ ಹಿತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಧ್ಯ ಈ ತಾರಾ ಜೋಡಿ ನಿಶ್ಚಿತಾರ್ಥ ಇಂದು ನೆರವೇರಿದ್ದು ಮದುವೆ ದಿನಾಂಕ ಂಆತ್ರ ಇನ್ನೂ ರಿವೀಲ್ ಆಗಬೇಕಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.