ಸಿನಿಮಾ ಸುದ್ದಿ

ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ಜೋಡಿ!

ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ, ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ..,.

ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ಜೋಡಿ!
ಶಿವರಾಜ್ ಕುಮಾರ್ ಮತ್ತು ಭಾವನಾ
Published On :
ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ, ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ. ಜಯಣ್ಣ ಕಂಬೈನ್ಸ್ ನ ನಾಲ್ಕನೇ ಚಿತ್ರವಾಗಿದೆ, 
ಟಗರು ಖ್ಯಾತಿಯ ಹಿಟ್ ಜೋಡಿ ಶಿವಣ್ಣ ಮತ್ತು ಭಾವನಾ ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ, ಜೂನ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ, 
ಶಿವರಾಜ್ ಕುಮಾರ್ ಗೆ ನಾಯಕಿ ಯಾರು ಎಂಬ ಹಲವು ಸುತ್ತಿನ ಚರ್ಚೆಗಳು ನಡೆದಿದ್ದವು, ಆ ಪಾತ್ರಕ್ಕೆ ಭಾವನಾ ಸೂಕ್ತ ಎಂದೆನಿಸಿತು, ಹೀಗಾಗಿ ಭಾವನಾ ಅವರನ್ನು ಸೆಲೆಕ್ಟ್ ಮಾಡಲಾಗಿದೆ. ಪ್ರೊಡಕ್ಷನ್ ಹೌಸ್ ಅಧಿಕೃತವಾಗಿ ಘೋಷಿಸುವುದಷ್ಟೇ ಬಾಕಿಯಿದೆ.
ಸೂರಿ ನಿರ್ದೇಶನದ ಜಾಕಿ ಸಿನಿಮಾ ಮೂಲಕ ಭಾವನಾ ಕನ್ನಡದಲ್ಲಿ ಸಿನಿಮಾ ಮೂಲಕ ಆರಂಭವಾಗಿದೆ, ಪ್ರಜ್ವಲ್ ದೇವರಾಜ್ ನಟನೆಯ 99 ಸಿನಿಮಾದಲ್ಲಿ ಗಣೇಶ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.