ಮನುಷ್ಯನ ವಿವಿಧ ಛಾಯೆಗಳ ಸುತ್ತ ಹೆಣೆದ ಕಥೆ 'ಮನರೂಪ': ಕಿರಣ್ ಹೆಗ್ಡೆ
ಚೊಚ್ಚಲ ನಿರ್ದೇಶಕ ಕಿರಣ್ ಹೆಗ್ಡೆ ಮನರೂಪ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ...

Published On :
ಚೊಚ್ಚಲ ನಿರ್ದೇಶಕ ಕಿರಣ್ ಹೆಗ್ಡೆ ಮನರೂಪ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸಂವಹನ ವಿಭಾಗದಲ್ಲಿ ತರಬೇತಿ ಪಡೆದಿರುವ ಕಿರಣ್ ಹೆಗ್ಡೆ ಮನಃಶಾಸ್ತ್ರ ಆಧಾರಿತ ಕ್ರೈಂ ಥ್ರಿಲ್ಲರ್ ಕಥೆಯನ್ನು ಚಿತ್ರ ಮಾಡಿದ್ದಾರೆ.
ಇದೊಂದು ಸಮಕಾಲೀನ ಆಧಾರಿತ ಕಥೆ ಮಾತ್ರವಲ್ಲದೆ ಮುಂದಿನ ತಲೆಮಾರಿನ ಜನರ ನಡತೆ ಬಗ್ಗೆ ಕೂಡ ತೋರಿಸುತ್ತದೆ. ಈಗಾಗಲೇ ಚಿತ್ರದ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅದು ಕುತೂಹಲ ಸೃಷ್ಟಿಸುತ್ತದೆ ಎನ್ನುತ್ತಾರೆ.
ಚಿತ್ರಪ್ರೇಮಿಗಳಲ್ಲಿ ಪೋಸ್ಟರ್ ಕುತೂಹಲ ಹುಟ್ಟಿಸುತ್ತದೆ. ಅರಣ್ಯದಲ್ಲಿನ ನೀರಿನ ಪ್ರದೇಶ ಮತ್ತು ಚಂದ್ರನ ಬೆಳಕಿನ ಪ್ರತಿಫಲನ ಇತ್ಯಾದಿಗಳನ್ನು ತೋರಿಸಲಾಗಿದ್ದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬಹುತೇಕ ಚಿತ್ರೀಕರಣಗೊಂಡಿದೆ. ಕಾಡೊಳಗೆ ನೋಡದಿರುವ ಜಾಗಗಳನ್ನು ಹುಡುಕಿ ಚಿತ್ರೀಕರಿಸಿ ಚಿತ್ರ ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


